ಹಾಸನ-ಮಂಗಳೂರು ನಡುವಿನ ರೈಲು ಹಳಿಯ ಮೇಲೆ ಭೂಕುಸಿತ: ಪುತ್ತೂರು-ಬೆಂಗಳೂರು ಸಹಿತ 10 ರೈಲುಗಳ ಸಂಚಾರ ರದ್ದು

ಹಾಸನ-ಮಂಗಳೂರು ನಡುವಿನ ರೈಲು ಹಳಿಯ ಮೇಲೆ ಭೂಕುಸಿತ: ಪುತ್ತೂರು-ಬೆಂಗಳೂರು ಸಹಿತ 10 ರೈಲುಗಳ ಸಂಚಾರ ರದ್ದು

Kadaba Times News

 ಕಡಬ ಟೈಮ್ಸ್: ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆಯ ನಡುವೆ ರೈಲು ಹಳಿಯ ಮೇಲೆ ಗುಡ್ಡ ಕುಸಿದು ಬಿದ್ದು ಹಾಸನ-ಮಂಗಳೂರು ನಡುವಿನ ಹಳಿಯ ಮೇಲೆ ಭೂಕುಸಿತವಾದ ಹಿನ್ನೆಲೆಯಲ್ಲಿ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಪುತ್ತೂರು-ಬೆಂಗಳೂರು ಸಹಿತ 10 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.


ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದೆಯಾದರೂ, ಹಳಿಯ ಮೇಲೆ ಬೃಹತ್ ಪ್ರಮಾಣದ ಮಣ್ಣಿನ ರಾಶಿ ಬಿದ್ದುದರಿಂದ ತೆರವು ಕಾರ್ಯಾಚರಣೆ ಕಾಮಗಾರಿ ಸಂಪೂರ್ಣವಾಗಿಲ್ಲ.ಈ ಕಾರಣದಿಂದ 10 ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ.



ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ (16595), ಕಾರವಾರ- ಕೆಎಸ್ಆರ್ ಬೆಂಗಳೂರು ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್ಪ್ರೆಸ್(16596), ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ (16585),ಮುರ್ಡೇಶ್ವರ್-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್(16586), ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ(07377),ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್(07378),ಕಾರವಾರ್-ಯಶವಂತಪುರ ಎಕ್ಸ್ಪ್ರೆಸ್(16516), ಯಶವಂತಪುರ-ಕಾರವಾರ್ ಎಕ್ಸ್ಪ್ರೆಸ್ (16575),ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16512)ಮತ್ತು ಕೆಸ್ಆರ್ಬೆಂಗಳೂರು-ಕಣ್ಣೂರು(16511)ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೇ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ|ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top