




ಕಡಬ ಟೈಮ್ಸ್, ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ನೆರೆ ನೀರಿನಲ್ಲಿ ಆನೆ ಮೃತದೇಹ ತೇಲಿ ಹೋದ ಘಟನೆ ಸೋಮವಾರ ತಡರಾತ್ರಿ ಕಂಡು ಬಂದಿತ್ತು.
ಆನೆ ಮೃತದೇಹ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇದುವರೆಗೆ ಪತ್ತೆಯಾಗಿಲ್ಲ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರು ವುದರಿಂದ ಹುಡುಕಾಟಕ್ಕೆ ಹಿನ್ನೆಡೆಯಾಗಿದೆ. ಇದೊಂದು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸವಾಲಿನ ಕೆಲಸವಾದಂತಿದೆ.
ಆನೆ ಮೃತದೇಹವನ್ನು ಅರಣ್ಯ ಇಲಾಖೆ ವತಿಯಿಂದ ಪತ್ತೆ ಹಚ್ಚುವ ಕಾರ್ಯಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಮಂಗಳವಾರ ಸಂಜೆವರೆಗೂ ಪತ್ತೆಯಾಗಿರಲಿಲ್ಲ.
ನೀರಿನ
ಮಟ್ಟ ಇಳಿಕೆ ಆದ ಬಳಿಕ ಮೃತ
ದೇಹ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರ ಅಂದಾಜಿನ ಪ್ರಕಾರ
ಹೆಚ್ಚು ನೀರಿದ್ದ ಕಾರಣ ಮೃತ ದೇಹ ಬಹುದೂರ ತೇಲಿ ಹೋಗಿರಬಹುದೆಂದು
ಅಭಿಪ್ರಾಯ ವ್ಯಕ್ತವಾಗಿದೆ.