




ಕಡಬ: ಯೋಗಾಸನದಲ್ಲಿ ಸಾಧನೆ ಮಾಡುವ ಮೂಲಕ ಕಡಬದ ಬಾಲೆಯೊಬ್ಬಳು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಸಾನ್ವಿ ದೊಡ್ಡಮನೆ ಸಾಧನೆ ಮಾಡಿದ ಬಾಲಕಿ.
ಕಡಬದ ನಿತ್ಯಾನಂದ ದೊಡ್ಡಮನೆ ಹಾಗೂ ಸೀತಾಲಕ್ಷ್ಮಿ ದಂಪತಿಯ ಪುತ್ರಿಯಾಗಿರುವ ಈಕೆ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಿರಂತರ ಯೋಗ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ಯೋಗ ಶಿಕ್ಷಕರಾದ ಶರತ್ ಮಾರ್ಗಿಲಡ್ಕ ಮತ್ತು ಸಂತೋಷ್ ಮೂಡುಕಜೆ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಗೋಮುಖಾಸನದಲ್ಲಿ 01 ಗಂಟೆ 01 ನಿಮಿಷ 21 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಬಾಲಕಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ಮಾತ್ರವಲ್ಲದೆ ನೋಬೆಲ್ ವರ್ಲ್ಡ್ ರೆಕಾರ್ಡ್ 2022 ಮತ್ತು ಭಾರತದಿಂದ ಪ್ರಸ್ತುತಪಡಿಸಲಾದ ಇಂಟರ್ನ್ಯಾಷನಲ್ ಎಕ್ಸಲೆನ್ಸ್ ಯೋಗಾಸನ ಪ್ಲೇಯರ್ 2022 ಪ್ರಶಸ್ತಿ, ಅಬ್ದುಲ್ ಕಲಾಂ ಬೈಂಡ್ ಫೋಲ್ಡ್ ವರ್ಲ್ಡ್ ರೆಕಾರ್ಡ್ ಅವಾರ್ಡ್ ಅಚೀವರ್ಸ್-2022, ಆತ್ಮ ಯೋಗ ಸೆಂಟರ್ ತಮಿಳುನಾಡು ಇವರು ಆಯೋಜಿಸಿದ ಯೂನಿವೆರ್ಸಲ್ ರೆಕಾರ್ಡ್ -2022 ಹಾಗೂ 11ನೇ ಯೋಗೋತ್ಸವ - 2022, ಶಿವಜ್ಯೋತಿ ಯೋಗ ಕೇಂದ್ರ ( ರಿ.)ಬೆಂಗಳೂರು ಇವರು ನಡೆಸಿದ ಯೋಗ ಕಲಾ ಪ್ರಶಸ್ತಿ, ಯೋಗ ಕಲಾ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿ ಮತ್ತು ಚಿನ್ನ, ಬೆಳ್ಳಿ ಕಂಚಿನ ಪದಕಗಳನ್ನು ಇವರು ಪಡೆದುಕೊಂಡಿದ್ದಾರೆ.