




ನೆಲ್ಯಾಡಿ: ಯಾವುದೇ ಪರವಾನಿಗೆ ಇಲ್ಲದೇ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಸಮೀಪದ ಮಠದಲ್ಲಿ ಪತ್ತೆಹಚ್ಚಿರುವ ಅರಣ್ಯ ಇಲಾಖಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ ಲಾರಿ ಸಹಿತ ಮರದ ದಿಮ್ಮಿ ವಶಪಡಿಸಿಕೊಂಡಿದೆ.
ಸುಳ್ಯ ತಾಲೂಕು ಅಲೆಟ್ಟಿ ನಿವಾಸಿ ನಿಖಿಲ್ ಸಂಗಮ್(26ವ.)ಬಂಧಿತ ಲಾರಿ ಚಾಲಕ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಲಾರಿಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಮಂಗಳೂರಿನತ್ತ ಸುಮಾರು 23 ಕಲ್ಬಾಗೆ ಮರದ ದಿಮ್ಮಿ ಗಳನ್ನು ಸಾಗಾಟ ಮಾಡಲಾಗುತ್ತಿತ್ತು.
ಇದೀಗ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಉಪ್ಪಿನಂಗಡಿ ಅರಣ್ಯ ಇಲಾಖಾಧಿಕಾರಿಗಳ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಆರ್‌ಎಫ್‌ಒ ಜಯಪ್ರಕಾಶ್ ಕೆ.ಕೆ., ಡಿಆರ್‌ಎಫ್‌ಒ ಭವಾನಿಶಂಕರ್, ಫಾರೆಸ್ಟರ್ ವಿನಯ್‌ಚಂದ್ರ, ತೇಜಕುಮಾರ್ ಹಾಗೂ ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.