




ಕಡಬ/ಮರ್ದಾಳ: ಅಧಿಕ ನಗದು ಇದ್ದ ಬ್ಯಾಗೊಂದನ್ನು ಹೋಟೆಲ್ ಗೆ ಬಂದ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದು ವಾರಿಸುದಾರರಿಗೆ ಮತ್ತೆ ಒಪ್ಪಿಸಿ ಹೋಟೆಲ್ ಮಾಲಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಕಡಬ ಸಮೀಪದ ಮರ್ದಾಳದಲ್ಲಿರುವ ಶ್ರೀ ಭಗವತಿ ಹೋಟೆಲ್ ಗೆ ಸಾಯಂಕಾಲದ ವೇಳೆ ಉದನೆ ಮೂಲದ ಉದ್ಯಮಿಯೊಬ್ಬರು ತನ್ನ ಮಗನ ಜೊತೆ ಚಹಾ ಕುಡಿಯುವ ಸಲುವಾಗಿ ಬಂದಿದ್ದರು.
ಈ ವೇಳೆ ಅಧಿಕ ಹಣವಿದ್ದ ಬ್ಯಾಗನ್ನು ಮರೆತು ಚಯರ್ ನಲ್ಲೇ ಬಿಟ್ಟು ಹೋಗಿದ್ದರು . ಕೆಲ ಸಮಯದ ಬಳಿಕ ಹೋಟೆಲ್ ಮಾಲಕರಾದ ಗೋಪಾಲಕೃಷ್ಣ ಅವರು ಗಮನಿಸಿ ಸುರಕ್ಷಿತವಾಗಿ ತೆಗೆದಿಟ್ಟಿದ್ದರು.
ಸುಮಾರು ಸಮಯದ ಬಳಿಕ ಬ್ಯಾಗ್ ಹುಟುಕುತ್ತಾ ಬಂದ ಗ್ರಾಹಕ ಮತ್ತೆ ಹೋಟೆಲ್ ನಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಬ್ಯಾಗನ್ನು ಹಿಂತಿರುಗಿಸಿದ್ದು ಸುಮಾರು 80,000 ರೂ ನಗದು ಮೊತ್ತ ಇರುವುದು ತಿಳಿದು ಬಂದಿದೆ.
ಹೋಟೆಲ್ ಮಾಲಕರ ಈ ಪ್ರಾಮಾಣಿಕತೆ ಕಂಡು ಕೃತಜ್ಞತೆ ಸಲ್ಲಿಸಿದ್ದಾರೆ.