




ಕಡಬ: ಬದುಕು ಕಟ್ಟೋಣ ಬನ್ನಿ ಎಂಬ ವಾಟ್ಸಪ್ ತಂಡವೊಂದು ದಾನಿಗಳ ನೆರವಿನೊಂದಿಗೆ ಸಂಕಷ್ಟಕ್ಕೆ ಒಳಗಾದ ಮಹಿಳೆಯೊಬ್ಬರಿಗೆ ಆರ್ಥಿಕ ನೆರವು ನೀಡಿ ಮಾದರಿ ಕಾರ್ಯದಿಂದ ಗುರುತಿಸಿಕೊಂಡಿದ್ದಾರೆ.
![]() |
ಮಹಿಳೆಗೆ ಚೆಕ್ ಹಸ್ತಾಂತರ ಮಾಡುತ್ತಿರುವ ತಂಡ |
ಕೋಡಿಂಬಾಳ ಗ್ರಾಮದ ಗುರಿಯಡ್ಕದ ಸರೋಜ ಎಂಬವರು ಗರ್ಭಕೋಶ
ಸಂಬಂಧಿತ ಕಾಯಿಲೆಗೆ ತುತ್ತಾಗಿದ್ದರು. ಹಲವು
ಬಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನರಿತ
ಬದುಕು ಕಟ್ಟೋಣ ಬನ್ನಿ ತಂಡ ಇವರ
ಕುಟುಂಬಕ್ಕೆ ಮನೋಧೈರ್ಯ ತುಂಬುವ ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ನೆರವಾಗಿದೆ.
ತನ್ನ ಗುಂಪಿನ ನಿಯಮದಂತೆ ಏಳನೆಯ ಸೇವಾ ಯೋಜನೆ ಇದಾಗಿದ್ದು 25,000 ರೂ ಗಳ ಚೆಕ್ ಅನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು. ಸಮಾಜಮುಖಿ ಕಾರ್ಯಗಳಲ್ಲಿ ಕೈ ಹಿಡಿಯುವ,ಪ್ರತಿಯೊಬ್ಬರ ಸಹಕಾರ, ಸಹಮತದಿಂದ ಈ ನೆರವು ನೀಡಲು ಸಾಧ್ಯವಾಗಿದೆ ಎಂದು ತಂಡದ ಮುಂದಾಳತ್ವ ವಹಿಸಿರುವ ಗಿರೀಶ್ ಕೋರಂದೂರು ಪ್ರತಿಕ್ರಿಯಿಸಿದ್ದಾರೆ.