




ಸುಳ್ಯ:ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಕಾರಿನಲ್ಲಿ ಬಂದ ತಂಡ ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಸುಳ್ಯದ ಅಜ್ಜಾವರ ಗ್ರಾಮದಿಂದ ವರದಿಯಾಗಿದೆ.
ಅಜ್ಜಾವರದ ಕಾಟಿಪಳ್ಳದ ಕುಶಲ ಎಂಬವರ ಪುತ್ರ ದೀನ್ ರಾಜ್ (17) ಎಂಬವರು ಜು.6ರಂದು ಮಧ್ಯಾಹ್ನ ಮನೆಯಿಂದ ಮೇನಾಲದ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.
![]() |
Picture used for representational purpose only |
ಈ ವೇಳೆ ಸುಳ್ಯ ಕಡೆಯಿಂದ ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಯುವಕನ ಬಳಿ ಕಾರು ನಿಲ್ಲಿಸಿ, ಎಲ್ಲಿಗೆ ಹೋಗುವುದೆಂದು ಕೇಳಿ ಕಾರಿನಲ್ಲಿ ಬರುವಂತೆ ಬಲವಂತವಾಗಿ ಒಳಗೆ ಹತ್ತಿಸಿದರೆನ್ನಲಾಗಿದೆ.
ದೀನ್ ರಾಜ್ ಕಾರಿನಲ್ಲಿದ್ದವರಲ್ಲಿ ಒಬ್ಬನಿಗೆ ಎರಡೇಟು ನೀಡಿ, ಡೋರ್ ತೆಗೆದು ಓಡಿ ಮೇನಾಲಕ್ಕೆ ಹೋಗಿ ವಿಷಯ ತಿಳಿಸಿದರೆನ್ನಲಾಗಿದೆ. ಕಾರು ಅಜ್ಜಾವರ ಕಡೆಗೆ ಮುಂದಕ್ಕೆ ಹೋಯಿತೆಂದು ತಿಳಿದುಬಂದಿದೆ.
ಘಟನೆಯ ಕುರಿತು ಧೀನ್ ರಾಜ್ ರ ತಂದೆ ಸುಳ್ಯ
ಪೋಲೀಸರಿಗೆ ಜು.7ರಂದು ದೂರು ನೀಡಿರುವುದಾಗಿ ತಿಳಿದುಬಂದಿದೆ.