




ಕಡಬ : ಪ್ರತಿ ದಿನ ಮುಖ್ಯ ರಸ್ತೆಯಲ್ಲೇ ಪೇಟೆ ಸವಾರಿ ಮಾಡುತ್ತಿದ್ದ ಆಡುಗಳ ಹಿಂಡನ್ನು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಹಿಡಿದು ಮೀನು ಮಾರುಕಟ್ಟೆಯ ಪ್ರಾಂಗಣದಲ್ಲಿ ಕೂಡಿ ಹಾಕಿ ಆಹಾರ ನೀರು ಕಲ್ಪಿಸಿದ್ದರು.
ಇದೀಗ
ಆಡಿನ ವಾರಿಸುದಾರರು ಪಣ್ಣ ಪಂಚಾಯತ್ ನಲ್ಲಿ ದಂಡ ಕಟ್ಟಿ ಮತ್ತು ಮುಚ್ಚಳಿಕೆ ಬರೆದು ಆಡುಗಳನ್ನು ಕೊಂಡು
ಹೋಗಿರುವುದಾಗಿ ತಿಳಿದು ಬಂದಿದೆ. ಒಟ್ಟು 11 ಆಡುಗಳ ಪೈಕಿ 10 ಆಡುಗಳು ಓರ್ವರಿಗೆ ಸೇರಿದ್ದು ಇನ್ನೊಂದು
ಆಡು ಬೇರೆ ವ್ಯಕ್ತಿಗೆ ಸೇರಿರುವುದಾಗಿದೆ. ಖತಿಜಾ ಹಾಗೂ ಅಝಿಜ್ ಎಂಬವರು ಪಟ್ಟಣ ಪಂಚಾಯತ್ ಗೆ ಒಟ್ಟು 2,500 ರೂ ದಂಡ ಕಟ್ಟಿ ಆಡುಗಳನ್ನು ರಸ್ತೆಗೆ ಬಿಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟಿರುವುದಾಗಿ ಮುಖ್ಯಾಧಿಕಾರಿ
ಲೀಲಾವತಿಯವರು ಕಡಬ ಟೈಮ್ಸ್ ಗೆ ಮಾಹಿತಿ ನೀಡಿದ್ದಾರೆ.
ಸಾಕು
ಪ್ರಾಣಿಗಳನ್ನು ರಸ್ತೆಗಳಿಗೆ
ಬಿಡದಂತೆ ಹಲವು ಬಾರಿ ಸೂಚನೆ ,ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದ ಸಾಕು ಪ್ರಾಣಿಗಳು ಕಡಬ ಪೇಟೆಯ ಸಾರ್ವಜನಿಕ
ಪ್ರದೇಶಗಳಲ್ಲಿ ತೊಂದರೆಯಾಗುವ ರೀತಿಯಲ್ಲಿ ಓಡಾಡುತ್ತಿದ್ದವು.
ಸಾರ್ವಜನಿಕರಿಂದ ವ್ಯಾಪಕ
ಪ್ರಶಂಸೆ:ದಿನವಿಡೀ ಅಡ್ಡಾದಿಟ್ಟಿ
ಪೇಟೆಯಲ್ಲಿ ಅಲೆದಾಡುತ್ತಿದ್ದ ಆಡುಗಳನ್ನು ಕಂಡು ವಾಹನ ಸವಾರರು,ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ
ಆಕ್ರೋಶ ಹೊರ ಹಾಕಿದ್ದರು. ಇದೀಗ ಆಡುಗಳನ್ನು ವಶಕ್ಕೆ ಪಡೆದು ದಂಡ ಕಟ್ಟಿಸಿ ಬಿಡುಗಡೆಗೊಳಿಸಿದ ವಿಚಾರ
ತಿಳಿದು ಪಟ್ಟನ ಪಂಚಾಯತ್ ಅಧಿಕಾರಿಗಳ ದಿಟ್ಟ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆಡು ಬಿಟ್ಟುಕೊಡುವಂತೆ ತೆರೆಮರೆಯಲ್ಲಿ
ನಿಂತು ಒತ್ತಡ: ಆಡುಗಳನ್ನು
ಬಂಧಿಸಿರುವ ವಿಚಾರ ಸುದ್ದಿಯಾಗುತ್ತಿದ್ದಂತೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಕೆಲವರು ಆಡುಗಳನ್ನು ಬಿಡುವಂತೆ ಅಧಿಕಾರಿಗಳಿಗೆ ಹೇಳಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಜಗ್ಗದ ಪಟ್ಟಣ
ಪಂಚಾಯತ್ ಅಧಿಕಾರಿಗಳು ದಂಡ ವಸೂಲತಿ ಮಾಡಿಯೇ ಎಚ್ಚರಿಕೆಯ ಸಂದೇಶ ರವಾನಿಸಿ ಸಾರ್ವಜನಿಕರ ಮೆಚ್ಚುಗೆಗೆ
ಪಾತ್ರರಾಗಿದ್ದಾರೆ.