




ಪಂಜ : ಭಾರೀ ಮಳೆಯಿಂದ ಪಂಜ ಹೊಳೆ ತುಂಬಿ ಹರಿಯುತ್ತಿದ್ದು, ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಗೆ ಹೊಳೆಯ ನೆರೆ ನೀರು ಆವರಿಸಿದೆ.
ಬೊಳ್ಳಲೆ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಗೊಂಡಿದ್ದು ಅಣೆಕಟ್ಟು ಮೇಲಿರುವ ಬಸ್ತಿಕಾಡು ಪ್ರದೇಶದ ಅನೇಕ ಮನೆಗಳಿಗೆ ಸಂಪರ್ಕಿಸುವ ರಸ್ತೆ ಕಡಿತಗೊಂಡಿದೆ.
ಮುಂಜಾಗ್ರತಾ
ಕ್ರಮವಾಗಿ ಈ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಬ್ಯಾರಿಕೇಡ್ ಹಾಕಿ ಬ್ಯಾನರ್ ಅಳವಡಿಸಿ ಮುಂಜಾಗೃತಾ ಕ್ರಮ
ಕೈಗೊಳ್ಳಲಾಗಿದೆ.
ಪಲ್ಲೋಡಿಯಲ್ಲಿ
ಉರುಳಿದ ಬೃಹತ್ ಮರ: ಪಂಜದ ಪಲ್ಲೋಡಿ ಪೆಟ್ರೋಲ್ ಪಂಪು
ಬಳಿ ಶುಕ್ರವಾರ ಸುರಿದ ಭಾರೀ ಮಳೆಗೆ ಮಣ್ಣು ಸಡಿಲಗೊಂಡು ಬೃಹತ್ ಮರ
ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದಾಗಿ ರಸ್ತೆಯಲ್ಲಿ
ವಾಹ ಸಂಚಾರ ಸ್ಥಗಿತವಾಗಿದೆ. ಸದ್ಯ ಪಂಜ- ಸುಬ್ರಹ್ಮಣ್ಯ ಸಂಪರ್ಕ ಕಡಿತಗೊಂಡಿದೆ. ಮರ ತೆರವು ಕಾರ್ಯಕ್ಕೆ
ಸ್ಥಳೀಯಾಡಳಿತ ಮುಂದಾಗಿದೆ.