ಕಡಬ: ಕಾಲನಿಗೆ ತೆರಳಿ ದಲಿತರ ಕುಂದು ಕೊರತೆ ಆಲಿಸಿದ ಎಸ್.ಐ ಅಭಿನಂದನ್

ಕಡಬ: ಕಾಲನಿಗೆ ತೆರಳಿ ದಲಿತರ ಕುಂದು ಕೊರತೆ ಆಲಿಸಿದ ಎಸ್.ಐ ಅಭಿನಂದನ್

Kadaba Times News

 ಕಡಬ/ಆಲಂಕಾರು:  ಕಾಲನಿಗೆ ತೆರಳಿ ಕಡಬ ಠಾಣಾ ಎಸ್.ಐ ಅಭಿನಂದನ್  ಅವರು  ದಲಿತರ ಕುಂದು ಕೊರತೆ  ಆಲಿಸಿದ್ದಾರೆ.


ಜುಲೈ 14ರಂದು ಆಲಂಕಾರು ಗ್ರಾಮದ ಗಾನಂತಿ ಪ್ರದೇಶಕ್ಕೆ ತೆರಳಿ ಅಲ್ಲಿನ ಕಾಲನಿ ನಿವಾಸಿಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದರು . ನಿವಾಸಿಗಳು  ಸಾಮಾಜಿಕ, ಆರ್ಥಿಕ ವಿಚಾರಗಳನ್ನು ಹಂಚಿಕೊಂಡರು.


ಕಾಲನಿ ನಿವಾಸಿಗಳ ಜೊತೆ ಮಾತನಾಡುತ್ತಿರುವ ಎಸ್.ಐ ಅಭಿನಂದನ್


ಈ ವೇಳೆ ಎಸ್.ಐ ಪೋಕ್ಸೋ ಕಾಯ್ದೆಯ ಕುರಿತು ಸಮಗ್ರ  ಮಾಹಿತಿ ನೀಡಿದರು.  ಅಲ್ಲದೆ ಶಾಲಾ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಹಲವು ಅವಕಾಶಗಳಿದ್ದು  ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಯಾವುದೇ ಸಮಸ್ಯೆಗಳು ಆದರಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದರು   . 

  ಸಂದರ್ಭದಲ್ಲಿ  ಠಾಣೆಯ ಹೆಡ್ ಕಾನ್ಸ್ಟೇಬಲ್  ಭವಿತ್ , ಚಾಲಕ ನಾರಾಯಣ  ಪಾಟಾಳಿ  ಜೊತೆಗೆಗಿದ್ದರು.  ಕರ್ನಾಟಕ  ಭೀಮ್  ಆರ್ಮಿ  ಅಧ್ಯಕ್ಷ   ರಾಘವ  ಕಳಾರ ಸ್ವಾಗತಿಸಿ ಧನ್ಯವಾದವಿತ್ತರು. 


ಕಾಲನಿಯ  ಮೋಹನ ಉಜುರ್ಲಿ ,  ಕೃಷ್ಣ  ಗಾನಂತಿ   ಕರಿಯ   ಗಾನಂತಿ,  ದಿನೇಶ್ ಗಾನಂತಿ ,  ವಿಜಯ  ಗಾನಂತಿ  , ಪ್ರಸನ್ನ ,ಕೃಷ್ಣಪ್ಪ   ಗಿರಿಜಾ,  ಶ್ರೀಧರ,    ಗುಡ್ಡಪ್ಪ,  ಜಯಂತ   ಸೇರಿದಂತೆ ಪ್ರಮುಖರಿದ್ದರು.

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top