




ಕಡಬ ಟೈಮ್: ಮೀನು ವ್ಯಾಪಾರಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ.
ಪಕ್ಷಿಕೆರೆ
ನಿವಾಸಿ ಅಬ್ದುಲ್ ಖಾದರ್ (55) ಮೃತಪಟ್ಟವರು.
ಕಿನ್ನಿಗೋಳಿ
ಮಂಗಳೂರುಬಸ್ ಸಿನಲ್ಲಿ ಏಜೆಂಟ್ ಆಗಿದ್ದು ಕೊರೋನ ನಂತರ ಮೀನು ವ್ಯಾಪರ ಪ್ರಾರಂಭಿಸಿದ್ದರು. ಎಂದಿನಂತೆ
ಮಲ್ಪೆಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ಮೀನು ತಂದು ಪಕ್ಷಿಕೆರೆ ಹೊಸಕಾಡು ಸಮೀಪ ಮನೆಯವರಿಗೆ ಮೀನು
ಕೊಡುವಾಗ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ಕೂಡಲೇ
ಖಾಸಗಿ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಈರ್ವರು
ಮಕ್ಕಳನ್ನು ಅಗಲಿದ್ದಾರೆ.