




ಸುಬ್ರಹ್ಮಣ್ಯ/ಗುತ್ತಿಗಾರು: ಇಲ್ಲಿನ ಗುತ್ತಿಗಾರು ಗ್ರಾ.ಪಂ ಸಭಾಭವನದಲ್ಲಿ ಪುನರ್ವಸತಿ ಕಾರ್ಯಕರ್ತರ ಸಭೆಯು ಜುಲೈ 13 ರಂದು ನಡೆಸಿದ್ದು ಸುಳ್ಯ ತಾಲೂಕು ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸುಳ್ಯ ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿ ಗುತ್ತಿಗಾರು ಗ್ರಾ.ಪಂನ ಶ್ರೀಮತಿ ಕಾವೇರಿ, ಅಧ್ಯಕ್ಷರಾಗಿ ಜಾಲ್ಲೂರು ಗ್ರಾ.ಪಂನ ಸದಾನಂದ ಪಿ, ಉಪಾಧ್ಯಕ್ಷರಾಗಿ ಬೆಳ್ಳಾರೆ ಗ್ರಾ.ಪಂ ನ ಶ್ರೀಮತಿ ಪುಷ್ಪಾಶ್ರೀ , ಪ್ರಧಾನ ಕಾರ್ಯದರ್ಶಿಯಾಗಿ ಅರಂತೋಡು ಗ್ರಾ.ಪಂನ ಶ್ರೀಮತಿ ಹರಿಣಿ ಪಿ ಜಿ, ಖಂಜಾಂಜಿಯಾಗಿ ಕೊಡಿಯಾಲ ಗ್ರಾ.ಪಂ ನ ಧರ್ಮಪಾಲ, ಸಂಘಟನಾ ಕಾರ್ಯದರ್ಶಿಯಾಗಿ ಅಮರ ಮುಡ್ನೂರು ಗ್ರಾ.ಪಂನ
ಶ್ರೀಧರ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಗೌರವ ಅದ್ಯಕ್ಷ ಪುಟ್ಟಣ್ಣ ವಲ್ಲಿಕಾಜೆ, ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಸುನಿಲ್. ಪಿ.ವಿ ಶಿರಾಡಿ , ಪ್ರಧಾನ ಕಾರ್ಯದರ್ಶಿ ಈರಣ್ಣ ಬೆಳ್ತಂಗಡಿ, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಬಿಳಿನೆಲೆ
,ಉಪಾಧ್ಯಕ್ಷರಾದ ಶ್ರೀ ಸೇಸಪ್ಪ ಶಾಂತಿನಗರ ಪುತ್ತೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ವಿಪುಲ್ ಬೆಳ್ತಂಗಡಿ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾದ್ಯಕ್ಷರಾದ ಶ್ರೀ ಸಂತೋಷ. ಪಿ ಕಡಬ, ಜಿಲ್ಲಾ ಮಹಿಳಾ ಘಟಕಾದ್ಯಕ್ಷೆ ಉಮಾವತಿ ಸುಳ್ಯ, ಸಂಘಟನಾ ಉಪ ಕಾರ್ಯದರ್ಶಿ ಕೃಷ್ಣಪ್ರಸಾದ್ ಸುಳ್ಯ, ಸದಸ್ಯರಾದ ಮೋಜನ್ ಕೆ.ಪಿ ಪುತ್ತೂರು, ಗಣೇಶ ಮೇಲಂತಬೆಟ್ಟು, ಹರೀಶ್ ಧರ್ಮಸ್ಥಳ, ಮೀನಾಕ್ಷಿ ಸುಳ್ಯ,ಸೇರಿದಂತೆ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು,
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತರು ಹಾಜರಿದ್ದರು ಉಪಸ್ಥಿತರಿದ್ದರು.