




ಸುಬ್ರಹ್ಮಣ್ಯ: ಜಾನುವಾರುಗಳು ಸಾಮಾನ್ಯವಾಗಿ ಹಸಿರು ಹುಲ್ಲು ಮಾತ್ರವಲ್ಲ ಮನೆಯಲ್ಲಿ ಸಿದ್ದಪಡಿಸಿದ ಆಹಾರವನ್ನೂ ತಿನ್ನುತ್ತವೆ. ಸುಬ್ರಹ್ಮಣದ ಹೋಟೆಲೊಂದರ ಬಳಿ ಬಿರುಸಿನ ಮಳೆಯ ನಡುವೆ ದೋಸೆ ಮಾಡುತ್ತಿರುವ ಸಂದರ್ಭ ಆಹಾರಕ್ಕಾಗಿ ಬೀಡಾಡಿ ದನವೊಂದು ಕಾಯುತ್ತಿರುವುದು ಮನಕಲಕುವಂತಿದೆ. ಜೊತೆಗೆ ಹೋಟೆಲ್ ಕಾರ್ಮಿಕನ ಕರುಣಾಮಯಿ ಹೃದಯಕ್ಕೆ ಜನ ಮನಸೋತಿದ್ದಾರೆ.
ಜುಲೈ 14 ರ ಸಂಜೆ ಕುಕ್ಕೆ ಸುಬ್ರಹ್ಮಣ್ಯದ ಪಾರ್ಕಿಂಗ್ ಬಳಿಯ ಖಾಸಗಿ ಹೋಟೆಲ್ ಬಳಿ ಈ ದೃಶ್ಯವನ್ನು ಪತ್ರಕರ್ತರೊಬ್ಬರು ಸೆರೆ ಹಿಡಿದಿದ್ದಾರೆ. ಸಾರ್ವಜನಿಕವಾಗಿ ಓಡಾಡುತ್ತಿದ್ದ ಈ ದನ ಎಡೆಬಿಡದೆ ಸುರಿಯುತ್ತಿದ್ದ ಮಳೆಯ ನಡುವೆ ಹೋಟೆಲ್ ಬಳಿ ಬಂದಿದೆ.
ಕಾರ್ಮಿಕರು ದೋಸೆ ತಯಾರಿಸುತ್ತಿದ್ದಾಗ ದನವು ಅದರ ಪಕ್ಕವೇ ಸುಮಾರು ಹೊತ್ತು ಕದಲದೆ ನಿಂತಿತ್ತು. ಇದನ್ನು ಗಮನಿಸಿದ ಹೋಟೆಲ್ ಕಾರ್ಮಿಕ ಗೋಮಾತೆಗೆ ದೋಸೆ ನೀಡಿದ್ದು ಅದನ್ನು ತಿಂದ ಬಳಿಕ ಹೊರಟಿದೆ.
ದೋಸೆವಾಲನ ಗೋ ಪ್ರೇಮಕ್ಕೂ ಮುಗ್ದ ದನದ ಕಾಯುವಿಕೆಗೂ ಜನರು ಮಾನಸೋತಿದ್ದಾರೆ . ಸದ್ಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದೆ.