ಕಡಬ: ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಧರ್ಮದೇಟು ,ಠಾಣೆಯಲ್ಲಿ ವಾರ್ನಿಂಗ್

ಕಡಬ: ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಧರ್ಮದೇಟು ,ಠಾಣೆಯಲ್ಲಿ ವಾರ್ನಿಂಗ್

Kadaba Times News

ಕಡಬ: ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ  ವ್ಯಕ್ತಿಯೊಬ್ಬನಿಗೆ ಧರ್ಮದೇಟು ನೀಡಿದ್ದು  ಬಳಿಕ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ ಘಟನೆ ವಾರದ ಹಿಂದೆ ನಡೆದಿರುವ   ವರದಿಯಾಗಿದೆ.



ಆಲಂಕಾರು ಸಮೀಪದ ಹಳೆ ನೇರೆಂಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.  ಮಹಿಳೆ ಇದ್ದ ಅಂಗಡಿಗೆ  ಬಂದಿದ್ದ  ಅದೇ ಗ್ರಾಮದ  ಪರಿಚಿತ   ವ್ಯಕ್ತಿ  ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿತ್ತು.  ಈ ಘಟನೆಯಿಂದ  ಆಕ್ರೋಶಗೊಂಡ   ಮಹಿಳೆ ಸಂಬಂಧಿಕರು ಆತನಿಗೆ  ಧರ್ಮದೇಟು ನೀಡಿದ್ದಾರೆ  ಎನ್ನಲಾಗಿದೆ.

ಬಳಿಕ ತನ್ನ ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದು ಪೊಲೀಸರು ತೆರಳಿ ಆತನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.   ಠಾಣೆಯಲ್ಲಿ ತಪ್ಪೊಪ್ಪಿಕೊಂಡ ಹಿನ್ನೆಲೆ ಮುಚ್ಚಳಿಕೆ  ಬರೆಸಿ  ಆತನಿಗೆ  ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top