




ಕಡಬ: ಕೆಸರಿನಲ್ಲಿ ಕಷ್ಟಪಟ್ಟು ನಡೆದಾಡುವ ಶಾಲಾ ಮಕ್ಕಳು, ವಾಹನಗಳು ರಸ್ತೆಯಲ್ಲೇ ಹೂತು ದೂಡಲು ಹರಸಾಹಸ ಪಡುತ್ತಿರುವ ವಾಹನ ಸವಾರರು ಇಂತಹ ದೃಶ್ಯ ಕಂಡು ಬಂದದ್ದು ದ.ಕ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ತಾಲೂಕಿನ ಐತ್ತೂರು ಗ್ರಾಮದ ರಸ್ತೆಯಲ್ಲಿ.
ಈ ಕೆಸರುಮಯ ರಸ್ತೆಯಲ್ಲಿ ಶಾಲಾ ಮಕ್ಕಳು ಕಷ್ಟ ಪಟ್ಟು ನಡೆದಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಐತ್ತೂರು ಗ್ರಾಮದ ವಾರ್ಡ್ ಸಂಖ್ಯೆ 2ರ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ಸುಂಕದ ಕಟ್ಟೆ ಶಾಲೆಯ ಹಿಂಬದಿ ಮೂಲಕ ಮುಖ್ಯ ರಸ್ತೆಯನ್ನು ಸೇರುತ್ತದೆ. ಅನ್ನಡ್ಕ ಎಂಬಲ್ಲಿ ರಸ್ತೆಯು ಪೂರ್ಣ ಕೆಸರುಮಯವಾಗಿದ್ದು ಈ ಭಾಗದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆಯ ಅವ್ಯವಸ್ಥೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬುದು ಇಲ್ಲಿನ ನಾಗರಿಕರ ಆರೋಪವಾಗಿದೆ.
ಇದು ಸುಮಾರು 70ಕ್ಕೂ ಅಧಿಕ ಮನೆಗಳನ್ನು ಸಂಪರ್ಕ ರಸ್ತೆಯಾಗಿದೆ. ಈ ಭಾಗದಿಂದ 30ಕ್ಕೂ ಹೆಚ್ಚು ಶಾಲಾ ಮಕ್ಕಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ನಿತ್ಯ ಕೆಲಸಗಳಿಗೆ ಹೋಗುವ ಕಾರ್ಮಿಕರು, ಶಾಲಾ ಮಕ್ಕಳು ,ಮಕ್ಕಳ ಪೋಷಕರು ಸಮಸ್ಯೆ ಎದುರುರಿಸುತ್ತಿದ್ದಾರೆ. ಮಳೆಗಾಲದ ಆರಂಭದಲ್ಲೇ ರಸ್ತೆಯನ್ನು ಅಗೆದಿರುವುದುದೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.
ಐತ್ತೂರು ಗ್ರಾ.ಪಂ ಅಭಿವೃದ್ದಿ
ಅಧಿಕಾರಿ,ಗ್ರಾ.ಪಂ ಅಧ್ಯಕ್ಷರು ಹೇಳಿದ್ದೇನು? : ರಸ್ತೆಯ ಮದ್ಯದಲ್ಲಿ ಕೆಸರು ಆಗಿದ್ದು ನಿಜ, ಕ್ರಿಯಾಯೋಜನೆಯಂತೆ ರಸ್ತೆಯನ್ನು ತಗ್ಗಿಸಲಾಗಿದೆ, ಮಳೆಗಾಲದ ಸಂದರ್ಭದಲ್ಲೇ ಮಾಡಿರುವುದರಿಂದ
ಕೆಸರುಮಯವಾಗಿದೆ. ರಸ್ತೆ ದುರಸ್ತಿಗೆ ಮೊದಲೇ ಸೂಚಿಸಲಾಗಿತ್ತು.ಈಗ ಸ್ಥಳಕ್ಕೆ ಭೇಟಿ ನೀಡಿ ಗ್ರಾ.ಪಂ
ವತಿಯಿಂದ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ, ರಸ್ತೆಯನ್ನು ಹಂತ ಹಂತವಾಗಿ ಎನ್ ಜಿ ಆರ್ ಅನುದಾನಡಡಿ
ಅಭಿವೃದ್ದಿ ಮಾಡಲು ಅವಕಾಶವಿದೆ ,ಸೂಕ್ತ ಸಂದರ್ಭದಲ್ಲಿ ಬಳಸಲಾಗುವುದು ಎಂದು ಪಿಡಿಒ ಸುಜಾತ ಅವರು ಕಡಬ ಟೈಮ್ ಗೆ ಮಾಹಿತಿ ನೀಡಿದ್ದಾರೆ.
ಗ್ರಾ.ಪಂ
ಅಧ್ಯಕ್ಷೆ ವತ್ಸಲಾ ಅವರು ಮಾತನಾಡಿ ಕೆಲಸರು ಮಯ ರಸ್ತೆಯಲ್ಲಿ
ಕಲ್ಲುಮಿಶ್ರಿತ ಮರಳು ಹಾಕಿ ಸರಿ ಮಾಡಲಾಗುತ್ತಿದೆ, ಇಲ್ಲಿನ ಸದಸ್ಯರ ಮುಂದಾಳತ್ವದಲ್ಲಿ ಆ ಭಾಗದ ಸಮಾರು
15ಕ್ಕೂ ಹೆಚ್ಚು ಮಂದಿ ರಸ್ತೆ ದುರಸ್ತಿಗೆ ಕೈಜೋಡಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್-ಬಿಜೆಪಿ ರಾಜಕೀಯ
ಲೆಕ್ಕಚಾರ ಇದೆಯಾ?: ಈ ಭಾಗದಲ್ಲಿ ಬಿಜೆಪಿ ಕನಿಷ್ಟ ಮತಗಳಿದ್ದು ಅತೀ ಹೆಚ್ಚು ಕಾಂಗ್ರೆಸ್ ಮತಗಳೇ ಅಧಿಕ. ಈ ಕಾರಣದಿಂದ ಚುನಾವಣೆಯಲ್ಲಿ ಗೆದ್ದ ಜನ ಪ್ರತಿನಿಧಿಗಳು ಇಲ್ಲಿನ ರಸ್ತೆಗೆ ಅನುದಾನ ನೀಡಲಾಗಿಲ್ಲ ಎಂಬ ಮಾತುಗಳು ಕೇಳಿ
ಬಂದಿದೆ. ಆದರೆ ಈಗ ಬಿಜೆಪಿಯ ಶಾಸಕಿ ಮತ್ತೆ ಗೆದ್ದು ಬಂದರೂ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೂಲಕ ಅನುದಾನ
ತರಿಸಲು ಸಾಧ್ಯವಿಲ್ಲವೆ ಎಂಬ ವಿಚಾರಗಳೂ ಚರ್ಚೆಯಾಗುತ್ತಿದೆ.