




ಕಡಬ: ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಕೊಡಮಾಡಿರುವ ಕನ್ನಡದ ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈಯವರ “ಬದುಕು ಕಟ್ಟಿದ ಬಗೆಗಳು” ಎಂಬ ಕೃತಿಯನ್ನು ಗ್ರಾಮಾಭಿವೃಧ್ಧಿ ಯೋಜನೆಯ ಮೂಲಕ ಕಡಬದ ವಿವಿಧ ಶಾಲಾ ಕಾಲೇಜುಗಳಿಗೆ ವಿತರಿಸಲಾಯಿತು.
ಸರಕಾರಿ ಪದವಿಪೂರ್ವ
ಕಾಲೇಜು ˌ ಸೈಂಟ್ ಜೋಕಿಮ್ಸ್ ಪದವಿಪೂರ್ವ
ಕಾಲೇಜು, ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲˌ
ಸರಕಾರಿ ಪ್ರೌಢಶಾಲೆ, ಸೈಂಟ್ ಆನ್ಸ್ ಪ್ರೌಢ ಶಾಲೆ, ಸರಸ್ವತಿ ಪ್ರೌಢಶಾಲೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ನೀಡಲಾಯಿತು.
ಪ್ರಸ್ತುತ ಪುಸ್ತಕದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು
ಅಗಲಿದ ಮಹನೀಯರ ಕುರಿತಾದ 39 ಆಪ್ತ ಲೇಖನಗಳಿವೆ. ಕರ್ನಾಟಕದ ಬಹುಭಾಷಿಕತೆ ಮತ್ತು ಪ್ರಾದೇಶಿಕತೆಯು
ಇಲ್ಲಿನ ಬಹುತೇಕ ಲೇಖನಗಳಲ್ಲಿ ಚರ್ಚಿತವಾದ ಮುಖ್ಯ ವಿಚಾರವಾಗಿದೆ. ವಿದ್ಯಾರ್ಥಿಗಳು ಪುಸ್ತಕವನ್ನು ಓದಿ ಜ್ಞಾನವನ್ನು ವೃದ್ದಿಸಿಕೊಳ್ಳುವ ಮೂಲಕ
ಸದುಪಯೋಗ
ಪಡೆದುಕೊಳ್ಳುವಂತೆ ಡಾ. ವೀರೇಂದ್ರ ಹೆಗ್ಗಡೆಯವರು
ಸಂದೇಶ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಯುವಜನ
ಓಕ್ಕೂಟದ ಅಧ್ಶಕ್ಷ ಶಿವಪ್ರಸಾದ್ ರೈ ಮೈಲೇರಿ . ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯ ಮೇಲ್ವೀಚಾರಕ
ರವಿಪ್ರಸಾದ್ ಆಲಾಜೆ ಸೇರಿದಂತೆ ಪ್ರಮುಖರು ಜೊತೆಯಾದರು.