




ಕಡಬ ಪಟ್ಟಣ ಪಂಚಾಯತ್ ನ ಹಸಿಮೀನು ಮಾರುಕಟ್ಟೆ ಏಲಂ ನ ಜೊತೆಗೆ ವಾರದ ಸಂತೆಯ ವರಿ ವಸೂಲಿ ಹಕ್ಕಿನ ಏಲಂ ಗೂ ಬಿಡ್ಡುದಾರರನ್ನು ಕರೆಯಲಾಗಿತ್ತು. ಸಂತೆಯ ವರಿ ವಸೂಲಿ ಹಕ್ಕಿನ ಏಲಂಗೆ 1.50ಲಕ್ಷ ಬಿಡ್ಡು ಪಂಚಾಯತ್ ನಿಗದಿ ಪಡಿಸಿತ್ತು
ಶನಿವಾರದಂದು ಪಂಚಾಯತ್ ಆಡಳಿತಾಧಿಕಾರಿ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ,
ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ನೇತೃತ್ವದಲ್ಲಿ ನಡೆದ ಏಲಂ ಪ್ರಕ್ರಿಯೆಯಲ್ಲಿ ಸುಮಾರು 40 ಜನ ಇ.ಎಂ.ಡಿ. ಪಾವತಿಸಿ ಏಲಂ ಗೆ ಭಾಗವಹಿಸಿದ್ದರು.
ಏಲಂ ಪ್ರಕ್ರಿಯೆ ಪ್ರಾರಂಭವಾದ ಕೂಡಲೇ ಆಗ್ರಹಿಸಿದ ಏಲಂದಾರರು
1.50 ಲಕ್ಷ ಬಿಡ್ ಇಟ್ಟರೆ ನಮಗೆ ನಷ್ಟವಾಗುತ್ತದೆ ಅದನ್ನು ಕಡಿಮೆ ಮಾಡುವಂತೆ ಆಗ್ರಹಿಸಿದರು. ಆದರೆ
ನಿಯಮದಂತೆ ಈಗಲೇ ಕಡಿಮೆ ಮಾಡಲು ಸಾಧ್ಯವಿಲ್ಲದ ಕಾರಣ ಅಧಿಕಾರಿಗಳು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ
ಯಾರು ಏಲಂನಲ್ಲಿ ಭಾಗವಹಿಸದೆ ಪಂಚಾಯತ್ ಬಳಿಯೇ ವರಿ ವಸೂಲಿ ಹಕ್ಕಿ ಇಟ್ಟುಕೊಳ್ಳಲಾಯಿತು.
ರಸ್ತೆ ಬದಿಯಲ್ಲಿ
ನಡೆಯುವ
ವಾರದ
ಸಂತೆ:
ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದವರು ಮಾತನಾಡಿ, ಸಂತೆ ಏಲಂ ಮಾಡುತ್ತಿರಿ, ಸಂತೆ
ನಡೆಯುವುದು ರಾಜ್ಯ ಹೆದ್ದಾರಿಯಲ್ಲಿ ನಾವು ಪಂಚಾಯತ್ ಗೆ ತೆರಿಗೆ ಕಟ್ಟಿ
ವ್ಯಾಪಾರ ಮಾಡುತ್ತೇವೆ, ನಮ್ಮ
ಅಂಗಡಿಗಳ ಎದುರು ಸಂತೆ ವ್ಯಾಪಾರ ನಡೆಯುತ್ತದೆ, ಸರಿಯಾದ ಸಂತೆ ಮಾರುಕಟ್ಟೆಯೂ ಇಲ್ಲ, ಮೊದಲು ಅದನ್ನು ಸರಿ ಮಾಡಿ ಎಂದು ಆಗ್ರಹಿಸಿದರು.