ರಾತ್ರಿ ವೇಳೆ ಮನೆಯ ಬಾಗಿಲು ತೆರೆಯಲು ಯತ್ನಿಸಿದ ಯುವಕ: ಪೊಲೀಸ್ ವಶಕ್ಕೆ ಒಪ್ಪಿಸಿದ ಮನೆಯವರು

ರಾತ್ರಿ ವೇಳೆ ಮನೆಯ ಬಾಗಿಲು ತೆರೆಯಲು ಯತ್ನಿಸಿದ ಯುವಕ: ಪೊಲೀಸ್ ವಶಕ್ಕೆ ಒಪ್ಪಿಸಿದ ಮನೆಯವರು

Kadaba Times News
ಸುಳ್ಯ: ಬಾಡಿಗೆ ಮನೆಯಲ್ಲಿದ್ದ ಯುವಕನೊಬ್ಬ ರಾತ್ರಿ ವೇಳೆ ಪಕ್ಕದ ಮನೆಯ ಕಾಪೌಂಡ್ ಒಳಗೆ ಬಂದು ಬಾಗಿಲು ತೆರೆಯಲು ಪ್ರಯತ್ನಿಸಿ ಆತಂಕ ಸೃಷ್ಠಿಸಿದ ಘಟನೆ ಜಯನಗರದಲ್ಲಿ ನಡೆದಿದೆ.

ಈ ಘಟನೆ ಜು. ೧೪ ರಂದು ರಾತ್ರಿ ಸುಮಾರು ೧೧ ಘಂಟೆ ವೇಳೆಗೆ ನಡೆದಿದೆ ಎಂದು ತಿಳಿದು ಬಂದಿದೆ

 ಮನೆಯವರಿಗೆ ವಿಷಯ ಗೊತ್ತಾಗುತ್ತಲೇ ಪಕ್ಕದಲ್ಲಿದ್ದ ತಮ್ಮ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ ಕಾರಣ ಯುವಕನನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿಯ ನಿವಾಸಿ ಕುಸುಮಾಧರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ಕಳ್ಳನಂತೆ ವರ್ತನೆ ಮಾಡಿದ ವ್ಯಕ್ತಿ ಅಲ್ಲೇ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದ ಕಲ್ಕತ್ತಾ ಮೂಲದ ಮನೆ ಸಾರಣೆ ಕೆಲಸ ಮಾಡುವ ವ್ಯಕ್ತಿ ಎಂದು ತಿಳಿದು ಬಂದಿದೆ.

ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top