




ದಕ್ಷಿಣ ಕನ್ನಡ/ಸುಳ್ಯ: ಕೆಲ ದಿನಗಳಿಂದ ದ.ಕ ಜಿಲ್ಲೆ ಸಹಿತ ಹಲವೆಡೆ ನಿರಂತರ ಮಳೆಯಾಗುತ್ತಿದೆ,ನಾನಾ ಭಾಗಗಳಲ್ಲಿ ಪ್ರಕೃತಿವಿಕೋಪ ಘಟನೆಗಳು ನಡೆದಿರುವ ವರದಿಯಾಗುತ್ತಿದೆ. ಇದೀಗ ಜುಲೈ 16ರಂದು ಸುಳ್ಯದಲ್ಲಿ ಮನೆಯೊಂದರ ಬಳಿ ಗುಹೆ ರೂಪದಲ್ಲಿ ಬೃಹತ್ ಆಕಾರದ ಗುಂಡಿ ಸೃಷ್ಟಿಯಾಗಿರುವುದು ಕಂಡು ಬಂದಿದೆ.
ಸಂಪಾಜೆ
ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜಾರಾಂಪುರದಲ್ಲಿ
ಮುಂಜಾನೆ ಬಾಳಪ್ಪ
ಎಂಬವರ ಮನೆ ಹಿಂಭಾಗ ದೊಡ್ಡ ಗುಂಡಿಯೊಂದು ಬಾಯ್ತೆರೆದುಕೊಂಡಿತ್ತು. ರಾತ್ರಿ ವೇಳೆ ದೊಡ್ದ
ರೀತಿಯಲ್ಲಿ ಶಬ್ದವೊಂದು ಕೇಳಿದೆ , ನಂತರ ಸ್ಥಳೀಯರು ಗಮನಿಸಿದಾಗ ದೊಡ್ಡ ಹೊಂಡ ನಿರ್ಮಾಣವಾಗಿದೆ. ಆಗಲೇ ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿತ್ತು.
ಇನ್ನು ಮಾಹಿತಿ ತಿಳಿದು ಸ್ಥಳೀಯರು,ಗ್ರಾ.ಪಂ ಆಡಳಿತ ಮಂಡಳಿಯವರು ಆಗಮಿಸಿದ್ದರು. ಬೃಹತ್ ಗುಂಡಿಯನ್ನು ಕಂಡು ಕೆಳಭಾಗದಲ್ಲಿ ಸುರಂಗವಿದೆ ಎಂಬ ಸುದ್ದಿಯೂ ಹಬ್ಬಿತ್ತು. ಈ ಘಟನೆ ತಿಳಿಯುತ್ತಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕಂದಾಯ
ಇಲಾಖೆ, ಇಂಜಿನೀಯರ್ ,ಗ್ರಾ.ಪಂ ಅಧಿಕಾರಿಗಳು ಸ್ಥಳಕ್ಕೆ
ಆಗಮಿಸಿ ಪರಿಶೀಲನೆ ನಡೆದ್ದಾರೆ. ಬಳಿಕ
ಬಾಯ್ತೆರೆದುಕೊಂಡಿದ್ದ ಗುಂಡಿಯನ್ನು ಜೆಸಿಬಿ ಯಂತ್ರದ ಮೂಲಕ ಸ್ಥಳೀಯಾಡಳಿತ
ಮುಚ್ಚಿ ಆತಂಕವನ್ನು ದೂರ ಮಾಡಿದೆ.