




ಕಡಬ: ಹಾಲು ಮತ್ತು ಇಂಧನ ಬೆಲೆ ಏರಿಸಿ ಕಾಂಗ್ರೆಸ್ ಸರ್ಕಾರ ಜನರಿಗೆ ತೊಂದರೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಸುಳ್ಯ ಮಂಡಲದ ಕಾರ್ಯಕರ್ತೆಯರು ಕಡಬ ಮಿನಿ ವಿಧಾನ ಸೌಧ ಮುಂಭಾಗ ಕಣ್ಣ ಚಹಾ ಪ್ರದರ್ಶಿಸುತ್ತಾ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇರುವಾಗ ರೈತರಿಗೆ ಪ್ರೋತ್ಸಾಹ ಧನವಾಗಿ ಲೀಟರ್ ಗೆ ಎರಡು ರೂಪಾಯಿ ಕೊಡುತ್ತಿದ್ದರು, ಅದನ್ನು ಈ ಸರಕಾರ ನಿಲ್ಲಿಸಿದೆ. ರೈತರಿಗೆ ಒಳ್ಳೆ ಯೋಜನೆ ತರಬೇಕಾದ ಈ ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿಯನ್ನು, ಕಾನೂನು ಅನ್ನು ಮಾಡುತ್ತಿದೆ. ಇವತ್ತು ಭಾಗ್ಯ ಭಾಗ್ಯ ಎಂದು ಹೇಳಿ ಯಾರಿಗೂ ದುಡ್ಡು ಬರುತ್ತಿಲ್ಲ ಹತ್ತು ತಿಂಗಳಿಂದ ಎರಡು ಸಾವಿರ ಯಾರಿಗೂ ಬರೋದೇ ಇಲ್ಲ ಮೋಸಮಾಡಿದ್ದಾರೆ . ಇಂದು ಸಂಕೇತಿಕವಾಗಿ ಹೊರಟ ಮಾಡುತ್ತಿದ್ದೇವೆ, ಮುಂದಿನ ದಿನ ಉಗ್ರಹೊರಟ ಮಾಡುತ್ತೇವೆ ಎಂದರು.
ಮಾತಿನ ಭರದಲ್ಲಿ ಏಕವಚನ ಪ್ರಯೋಗ :ಬಸ್ಸಿನ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ, ಅಂಗನವಾಡಿಗೆ ಸರಿಯಾದ ಪೌಷ್ಟಿಕ ಆಹಾರ ಬರುತ್ತಿಲ್ಲ, ಅಂಗನವಾಡಿ ಕಾರ್ಯಕರ್ತೆಯರು ಸೂಕ್ತ ಸಂಬಳವಿಲ್ಲದೆ ಆತ್ಮಹತ್ಯೆ ಮಾಡುವ ಸ್ಥಿತಿಯಲ್ಲಿದ್ದಾರೆ. ಎಲ್ಲವನ್ನೂ ಕಣ್ಣು ಮುಚ್ಚಿಕೊಂಡು ಬೆಕ್ಕು ಹಾಲು ಕುಡಿದ ಹಾಗೆ ಮಾಡುವ ಸಿದ್ದರಾಮಯ್ಯ ನಿಗೆ ಇದೆಲ್ಲ ಯಾಕೆ ಕಾಣಲ್ಲ ಎಂದು ಟೀಕಿಸುವ ಭರದಲ್ಲಿ ಶಾಸಕಿಯವರು ಸಿಎಂ ವಿರುದ್ದ ಏಕವಚನ ಪ್ರಯೋಗಿಸಿದರು.
ಸ್ಟೀಲ್ ಪಾತ್ರೆಯಲ್ಲಿ ತಂದ ಕಣ್ಣ ಚಹಾ ಅನ್ನು ಕಾರ್ಯಕರ್ತರು ಹಂಚಿ ಕುಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸುಳ್ಯ ಬಿ ಜೆ ಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ಪುಲಸ್ಯ ರೈ್ ಸೇರಿದಂತೆ ಬಿಜೆಪಿಯ ಮಹಿಳಾ ಪ್ರಮುಖರು ಪಾಲ್ಗೊಂಡಿದ್ದರು.