




ಕಡಬ : ಪ್ರತಿ ದಿನ ಮುಖ್ಯ ರಸ್ತೆಯಲ್ಲೇ ಪೇಟೆ ಸವಾರಿ ಮಾಡುತ್ತಿದ್ದ ಆಡುಗಳ ಹಿಂಡನ್ನು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಹಿಡಿದು ಮೀನು ಮಾರುಕಟ್ಟೆಯ ಪ್ರಾಂಗಣದಲ್ಲಿ ಕೂಡಿ ಹಾಕಿ ಆಹಾರ ನೀರು ಕಲ್ಪಿಸಿದ ಘಟನೆ ಜೂ.1 ರಂದು ನಡೆದಿದೆ.
ಸಾಕು ಪ್ರಾಣಿಗಳನ್ನು ರಸ್ತೆಗಳಿಗೆ ಬಿಡದಂತೆ ಹಲವು ಬಾರಿ ಸೂಚನೆ ,ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದ ಸಾಕು ಪ್ರಾಣಿಗಳು ಕಡಬ ಪೇಟೆಯ ಸಾರ್ವಜನಿಕ ಪ್ರದೇಶಗಳಲ್ಲಿ ತೊಂದರೆಯಾಗುವ ರೀತಿಯಲ್ಲಿ ಓಡಾಡುತ್ತಿದ್ದವು. ಸಾರ್ವಜನಿಕರ ದೂರಿನ ಮೇರೆಗೆ ಪಟ್ಟನ ಪಂಚಾಯತ್ ಅಧಿಕಾರಿಗಳು ಮಾಲಿಕರ ಮನೆಗೂ ತೆರಳಿ ಎಚ್ಚರಿಸಿದ್ದರು . ಆದರೆ ಪಟ್ಟಣ ಪಂಚಾಯತ್ ಸೂಚನೆ ಮೀರಿ ಮತ್ತೆ ಆಡುಗಳನ್ನು ರಸ್ತೆಗೆ ಬಿಟ್ಟ ಆಡುಗಳನ್ನು ಕಡಬ ಮೀನು ಮಾರುಕಟ್ಟೆಯಲ್ಲಿನ ಶೆಡ್ ನಲ್ಲಿ ಕೂಡಿ ಹಾಕಿ ಪಟ್ಟಣ ಪಂಚಾಯತ್ ನಿಂದಲೇ ಆಹಾರ ಒದಗಿಸಿದ್ದಾರೆ .
ಒಟ್ಟು 11 ಆಡುಗಳನ್ನು ಹಿಡಿಯಲಾಗಿದ್ದು ಅದರಲ್ಲಿ 10 ಆಡುಗಳು
ಒಂದೇ ವ್ಯಕ್ತಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಒಂದು ಆಡಿನ ವಾರಿಸುದಾರರ ಮಾಹಿತಿ ಲಭ್ಯವಿಲ್ಲವಾಗಿದೆ. ಆಡಿನ ಮಾಲಿಕರು ಕಡಬ ಪಟ್ಟಣ ಪಂಚಾಯತ್ ಗೆ ಆಗಮಿಸಿ ಆಡುಗಳನ್ನು
ಬಿಟ್ಟುಕೊಡುವಂತೆ ವಿನಂತಿಸಿದರೂ ದಂಡ ಕಟ್ಟಿಯೇ ಆಡುಗಳನ್ನು ಕೊಂಡುಹೋಗುವಂತೆ ಸೂಚಿಸಿರುವುದಾಗಿ ತಿಳಿದು
ಬಂದಿದೆ.
ಈ ಬಗ್ಗೆ ಕಡಬ ಟೈಮ್ ಕಡಬ ಟೈಮ್ ಜೊತೆ ಮಾತನಾಡಿದ ಪಟ್ಟಣ
ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿಯವರು , ಆಡಿನ ಮಾಲಿಕರಿಗೆ ರಸ್ತೆಗೆ ಬಿಡದಂತೆ ಮನೆಗೆ ತೆರಳಿಯೂ
ಎಚ್ಚರಿಕೆ ನೀಡಲಾಗಿತ್ತು.ಆದರೂ ಮತ್ತೆ ಬೀದಿಗೆ ಬಿಟ್ಟಿದ್ದು
ಸಾರ್ವಜನಿಕರ ದೂರಿನ ಮೇರೆಗೆ ಸುಮಾರು11 ಆಡುಗಳನ್ನು ಹಿಡಿಯಲಾಗಿದೆ. ದೊಡ್ಡಿಯ ವ್ಯವಸ್ಥೆ ಇಲ್ಲದ ಕಾರಣ
ಮೀನು ಮಾರುಕಟ್ಟೆಯ ಶೆಡ್ ನಲ್ಲಿ ಕೂಡಿ ಹಾಕಲಾಗಿದೆ,ಅಲ್ಲದೆ ಪ.ಪಂ ವತಿಯಿಂದಲೇ ಆಹಾರ, ನೀರಿನ ವ್ಯವಸ್ಥೆ
ಕಲ್ಪಿಸಲಾಗಿದೆ. ಸುಮಾರು 5,000ದಂಡ ವಿಧಿಸಲು ಅವಕಾಶವಿದ್ದು
ದಂಡ ಕಟ್ಟಿ ಮತ್ತೆ ರಸ್ತೆಗೆ ಬಿಡದಂತೆ ಮುಚ್ಚಳಿಕೆ ಬರೆಸಿ ಆಡುಗಳನ್ನು ವಾರಿಸುದಾರರಿಗೆ ನೀಡಲಾಗುವುದು
ಎಂದಿದ್ದಾರೆ.