




ಕುಕ್ಕೆ
ಸುಬ್ರಮಣ್ಯ: ಇಲ್ಲಿನ ಠಾಣಾ ವ್ಯಾಪ್ತಿಯ ಮೆಸ್ಕಾಂ ಶಾಖೆಯಿಂದ
ನಾಲ್ಕು ತಿಂಗಳ ಹಿಂದೆ ನಡೆದ ಬ್ಯಾಟರಿ ಕಳ್ಳತನ ಪ್ರಕರಣವನ್ನು ಸುಬ್ರಹ್ಮಣ್ಯ ಪೊಲೀಸರು ಭೇದಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್ ಎಂಬತನನ್ನು ಬಂಧಿಸಿ
ಆತನಿಂದ ಹಣ ಹಾಗೂ ಬ್ಯಾಟರಿ ವಶಪಡಿಸಿಕೊಳ್ಳಲಾಗಿತ್ತು, ಇದೀಗ ಇನ್ನೊಬ್ಬ ಆರೋಪಿ
ಮುತ್ತು ಯಾನೆ ಮಣಿ ಎಂಬತನನ್ನು ಮಂಗಳೂರಿನಲ್ಲಿ ಪೊಲೀಸರು
ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ವಿಟ್ಲ ಹಾಗೂ ಸುಳ್ಯ ವ್ಯಾಪ್ತಿಯಲ್ಲಿ
ಕಳ್ಳತನ ಮಾಡುತ್ತಿರುವ ವಿಚಾರ ಪೊಲೀಸರ ವಿಚಾರಣೆಯ ವೇಳೆ ತಿಳಿದು ಬಂದಿದೆ.
ಈ
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಸತೀಶ್ , ಠಾಣಾ ಎಸ್ ಐ ಕಾರ್ತಿಕ್ ಹಾಗೂ
ಸಿಬ್ಬಂದಿಗಳು ಸಹರಿಸಿದ್ದರು