ಮನೆ ಹಾನಿ ಪರಿಹಾರ ಪಡೆಯಲು ಇರುವ ಷರತ್ತು ಏನು?,ಯಾರು ಅರ್ಹರು?

ಮನೆ ಹಾನಿ ಪರಿಹಾರ ಪಡೆಯಲು ಇರುವ ಷರತ್ತು ಏನು?,ಯಾರು ಅರ್ಹರು?

Kadaba Times News

ಕಡಬ ಟೈಮ್ಸ್(KADABA TIMES):ಅತಿವೃಷ್ಟಿ, ಪ್ರವಾಹದಿಂದ ಮನೆ ಹಾನಿ ಪರಿಹಾರ ನೀಡುವ ವಿಚಾರವಾಗಿ ಸರ್ಕಾರ ಸ್ಪಷ್ಟನೆ ನೀಡಿದೆ. 2022 ರಲ್ಲಿ ಯಾರು ಪರಿಹಾರ ಪಡೆಯಲು ಅರ್ಹರು ಎಂಬುದಕ್ಕೆ ಕಂದಾಯ ಇಲಾಖೆ ಸ್ಪಷ್ಟೀಕರಣ ನೀಡಿದೆ.ಎಲ್ಲಾ ಡಿಸಿಗಳಿಗೂ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

2019, 2020, 2021 ರಲ್ಲಿ ಎ ಮತ್ತು ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿದ್ದರೆ 2022 ರಲ್ಲಿ ಪುನಃ ಪರಿಹಾರ ಪಡೆಯಲು ಅರ್ಹರಲ್ಲ ಎಂದು ಕಂದಾಯ ಇಲಾಖೆ ಸ್ಪಷ್ಟನೆ ನೀಡಿದೆ. ಪರಿಹಾರ ಯಾರು ಪಡೆಯಬಹುದು ಅಂತ ಸರ್ಕಾರ ವಿವರವಾದ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.

ಪರಿಹಾರ ಪಡೆಯಲು ಯಾರು ಅರ್ಹರು?: ವಾಸದ ಮನೆ ಅಧಿಕೃತ ಮನೆಯಾದಲ್ಲಿ ನಿಯಮಾನುಸಾರ ಪರಿಹಾರ ಪಾವತಿಸಬಹುದು. ಆದರೆ, ಜಮೀನಿನಲ್ಲಿ ಕಟ್ಟಿರುವ ಮನೆಗಳು (Farm House), ಸರ್ಕಾರಿ ಜಮೀನು, ಗೋಮಾಳಗಳಲ್ಲಿ ಜನ ವಾಸವಾಗಿರುವ ಮನೆಗಳು ಅನಧಿಕೃತವಾದಲ್ಲಿ ನಿಯಮಾನುಸಾರ ಅಫಿಡವಿಟ್ ಪಡೆದು ರೂ.1.00 ಲಕ್ಷ Ex-gratria ಪಾವತಿಸುವುದು.

ವಿವಿಧ ಸರ್ಕಾರಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಕೆಲಸ ಪೂರ್ಣಗೊಂಡು ನಿಯಮಾನುಸಾರ ಸಾರ್ವಜನಿಕರಿಗೆ ಮನೆ ಹಂಚಿಕೆಯಾಗಿರಬೇಕು. ಹಾಗೂ ಈ ಮನೆಯಲ್ಲಿ ಜನ ವಾಸವಿರಬೇಕು.ಇಂತಹ ಮನೆ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದಲ್ಲಿ ಸರ್ಕಾರಿ ಆದೇಶದನ್ವಯ A.B. ಹಾಗೂ C ಕೆಟಗರಿಯಲ್ಲಿ ಪರಿಹಾರ ಪಾವತಿಸುವುದು.

2019, 2020 ಮತ್ತು 2021ನೇ ಸಾಲಿನಲ್ಲಿ ಅತಿವೃಷ್ಟಿ,ಪ್ರವಾಹದಿಂದ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆ ಪುನಃ 2022 ಸಾಲಿನಲ್ಲಿ ಹಾನಿಯಾದಲ್ಲಿ ಪರಿಹಾರ ಪಡೆಯಲು ಅರ್ಹರಿರುವುದಿಲ್ಲ.  ಆದರೆ 2019, 2020 ನೇ ಸಾಲಿನಲ್ಲಿ ಅಲ್ಪಸ್ವಲ್ಪ ಮನೆ ಹಾನಿಯಾದ ‘ಸಿ’ ಕಟಗರಿಯಲ್ಲಿ ಸರ್ಕಾರದಿಂದ ರೂ.50,000 ಪರಿಹಾರ ಪಡೆದಿರುವ ಮನೆಗಳು ಪುನಃ 2022ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದಲ್ಲಿ A,B ಮತ್ತು C ಕೆಟಗರಿಯಲ್ಲಿ ಪರಿಹಾರ ಪಾವತಿಸಬಹುದು ಎಂದು ಸ್ಪಷ್ಟನೆ ನೀಡಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top