




ಕಡಬ ಟೈಮ್ಸ್(KADABA TIMES):ಕಡಬ/ಸುಬ್ರಹ್ಮಣ್ಯ: ಸುಳ್ಯ ಮತ್ತು ಕಡಬ ಉಭಯ ತಾಲೂಕಿನಲ್ಲಿ ರಣ ಭೀಕರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.ಮಳೆಯಿಂದಾಗಿ ಎರಡು ಜೀವ ಹಾನಿಗಳಾಗಿದ್ದು ನೂರಾರು ಎಕರೆ ತೋಟಗಳು ಹಾನಿಗೊಂಡಿವೆ.
ಬಾರಿ ಮಳೆಯ ಕಾರಣ ನಾಡಿ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸೇರಿ ಆನೇಕ ಗ್ರಾಮಗಳು ಭಾರಿ ಹಾನಿಗೊಳಗಾಗಿದ್ದು, ಹೊರಗಿನ ಸಂಪರ್ಕ ಕಡಿತಗೊಂಡಿವೆ.

ರಸ್ತೆ, ಸೇತುವೆಗಳು ಭಾರಿ ಪ್ರಮಾಣದಲ್ಲಿ ಹಾನಿಗಳೊಗಾಗಿವೆ. ವಿದ್ಯುತ್, ದೂರವಾಣಿ ಸೇರಿದಂತೆ ಎಲ್ಲಾ ಸಂಪರ್ಕಗಳು ಕಡಿತಗೊಂಡಿದೆ. ಎನ್ ಡಿ ಆರ್ ಎಫ್. ಎಸ್ ಡಿ ಆರ್ ಎಫ್, ಸ್ಥಳಿಯ ಸಂಘ ಸಂಸ್ಥೆಗಳು, ಅಧಿಕಾರಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.
ಇಂದು ಪ್ರಸ್ತುತ ಮಳೆಯ ಪ್ರಮಾಣ ಪ್ರಸ್ತುತ ಕೊಂಚ ಕಡಿಮೆಯಾಗಿದ್ದರೂ ಮುಂಜಾಗೃತಾ ಕ್ರಮವಾಗಿ ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲಾ – ಕಾಲೇಜುಗಳಿಗೆ ಇಂದು (ಆಗಸ್ಟ್ 20 ರಂದು ರಜೆ ಘೋಷಣೆ ಮಾಡಿ ದ.ಕ. ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಆದೇಶ ಹೊರಡಿಸಿದ್ದಾರೆ.