




ಕಡಬ ಟೈಮ್ಸ್(KADABA TIMES):ನೆಲ್ಯಾಡಿ/ಕೊಕ್ಕಡ: ಕೊಕ್ಕಡ ಸಮೀಪದ ಕಾಪಿನ ಬಾಗಿಲು ಎಂಬಲ್ಲಿ ನವ ಜೋಡಿಯೊಂದನ್ನು ಹಿಂದೂ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಗದಗ ಮೂಲದ ಭಿನ್ನ ಕೋಮಿನ ಯುವಕ ಹಿಂದೂ ಯುವತಿ ಜೊತೆ ಧರ್ಮಸ್ಥಳಕ್ಕೆ ಬಂದು ಖಾಸಗಿ ಲಾಡ್ಜ್ ಬುಕ್ಕಿಂಗ್ ಗಾಗಿ ಕಾಪಿನ ಬಾಗಿಲು ಎಂಬಲ್ಲಿ ಬಂದಿದ್ದರು ಎನ್ನಲಾಗಿದೆ.

ಲಾಡ್ಜ್ ಸಿಬ್ಬಂದಿಯು ರೂಮ್ ನೀಡಲು ನಿರಾಕರಿಸಿದ ಕಾರಣ ತಕ್ಷಣ ಅಲ್ಲಿಂದ ಮರಳಿ ಬೆಂಗಳೂರು ಕಡೆಗೆ ಪ್ರಯಾಣಿಸಲು ಬಸ್ ಹತ್ತಿ ತೆರಳುತ್ತಿದ್ದಾದ ಕೊಕ್ಕಡ ಸಮೀಪ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯುವತಿಯು ವಿದ್ಯಾ ಸಂಸ್ಥೆಯೊಂದರಲ್ಲಿ ಉಪನ್ಯಾಸಕಿ ಎಂದು ತಿಳಿದು ಬಂದಿದೆ.ಹೆಚ್ಚಿನ ವಿವರ ತಿಳಿದಿಲ್ಲ.