




ಕಡಬ ಟೈಮ್ಸ್(KADABA TIMES):ತೋಟದ ಕೆರೆಗೆ ರಬ್ಬರ್ ಟ್ಯಾಪರ್ ಒಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಆ.7ರ ರಾತ್ರಿ ನಡೆದ ಬಗ್ಗೆ ಪುತ್ತೂರಿನ ದರ್ಬೆತ್ತಡ್ಕದಲ್ಲಿ ನಡೆದಿದೆ.
ಕೇರಳ ಮೂಲದ ಕಾರ್ಮಿಕ ದರ್ಬೆತ್ತಡ್ಕದಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದು ಸ್ಥಳೀಯವಾಗಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಶನೂಶ್(23ವ) ಎಂಬವರು ಮೃತಪಟ್ಟವರು.

ಸಂಜೆವೇಳೆ ತನ್ನ ಪರಿಚಯಸ್ಥರೊಂದಿಗೆ ಬಾಲಕೃಷ್ಣ ಆಚಾರ್ಯ ಎಂಬವರ ತೋಟದ ಕೆರೆಯಲ್ಲಿ ಸ್ನಾನಕ್ಕೆ ಇಳಿದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ . ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.