ಸುಬ್ರಹ್ಮಣ್ಯ: ನಾಪತ್ತೆಯಾಗಿದ್ದ ಮುದ್ದಾದ ನಾಯಿಮರಿಗಳು ಎರಡು ದಿನಗಳ ಬಳಿಕ ಪತ್ತೆ

ಸುಬ್ರಹ್ಮಣ್ಯ: ನಾಪತ್ತೆಯಾಗಿದ್ದ ಮುದ್ದಾದ ನಾಯಿಮರಿಗಳು ಎರಡು ದಿನಗಳ ಬಳಿಕ ಪತ್ತೆ

Kadaba Times News

ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ/ಕಡಬ : ಭಾರಿ ಮಳೆಗೆ ಸುಬ್ರಹ್ಮಣ್ಯ ಕೊಲ್ಲಮೊಗ್ರದಲ್ಲಿ ನೆರೆ ನೀರಿನಿಂದಾಗಿ ಜೀವ ಭಯದಲ್ಲಿ ಓಡಿ ಹೋಗಿ ನಾಪತ್ತೆಯಾಗಿದ್ದ ಮನೆಯೊಂದರ ಎರಡು ನಾಯಿ ಮರಿಗಳು ಎರಡು ದಿನಗಳ ನಂತರ ಕಾಣಸಿಕ್ಕಿದ್ದು ಮನೆಮಂದಿ ಹರ್ಷಗೊಂಡಿದ್ದಾರೆ.

ದೋಲನಮನೆ ಲಲಿತಾ ಅವರ ಮನೆಯ ರಾಜು ಮತ್ತು ರಾಣಿ ಎಂಬ ಪಮೋರಿಯನ್‌ ನಾಯಿಗಳು ನಾಪತ್ತೆಯಾಗಿದ್ದವು. ಹೀಗಾಗಿ ನೀರಿನಲ್ಲಿ  ಕೊಚ್ಚಿ ಹೋಗಿ  ನಾಯಿಗಳು ಸಾವನ್ನಪ್ಪಿರಬಹುದೆಂದು ಭಾವಿಸಿದ್ದರು.

ಎರಡು ದಿನಗಳ ಬಳಿಕ ಬಂದ ಕರೆಯೊಂದು ಅವರ ಮೊಗದಲ್ಲಿ ನಗುವನ್ನು ಅರಳಿಸಿದೆ. ಕೊಚ್ಚಿ ಹೋದ ರಾಜು-ರಾಣಿ ಶ್ವಾನಗಳು ಬದುಕಿವೆ ಎಂಬ ಮಾಹಿತಿಯು ದುಃಖದಲ್ಲಿದ್ದ ಕುಟುಂಬದಲ್ಲಿ ಸಂತಸ ಮೂಡಿಸಿದೆ. ಶ್ವಾನಗಳ ಪತ್ತೆ ಹಚ್ಚುವಲ್ಲಿ ಕೊಲ್ಲಮೊಗ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ ಚಾಂತಳ, ಗ್ರಾಮ ಪಂಚಾಯಿತಿ ಸದಸ್ಯ ಮಾಧವ ಚಾಂತಳ ಸಹಕರಿಸಿದ್ದಾರೆ

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top