




ಕಡಬ ಟೈಮ್ಸ್(KADABA TIMES):ಸುಳ್ಯ/ಸಂಪಾಜೆ: ಬಾಡಿಗೆ ಮನೆಯೊಂದರಲ್ಲಿ ನೇಣುಬಿಗಿದು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.5ರಂದು ಕೊಡಗು ಸಂಪಾಜೆಯಲ್ಲಿ ಸಂಭವಿಸಿದೆ.
ಕೊಡಗು ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ದೇವರಾಜ್ ಎಂಬವರ ಪತ್ನಿ ಲಕ್ಷ್ಮಿ ಅವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ .

ದೇವರಾಜ್ ಅವರು ಮೈಸೂರಿನ ರಾಮನಾಥಪುರಂ ಎಂಬಲ್ಲಿ ಹೋಂಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಆ.5ರಂದು ಬೆಳಿಗ್ಗೆ ದೇವರಾಜ್ ಅವರು ಪತ್ನಿಗೆ ಫೋನ್ ಕರೆ ಮಾಡಿದಾಗ ಕರೆ ಸ್ವೀಕರಿಸುತ್ತಿಲ್ಲವೆನ್ನಲಾಗಿದೆ. ಇದರಿಂದ ದೇವರಾಜ್ ಅವರು ಪಕ್ಕದ ಮನೆಗೆ ಫೋನ್ ಮಾಡಿದ ಹಿನ್ನೆಲೆಯಲ್ಲಿ ಪಕ್ಕದ ಮನೆಯಾಕೆ ಹೋಗಿ ಕಿಟಕಿ ಮೂಲಕ ನೋಡುವಾಗ ಲಕ್ಷ್ಮಿ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಳಿಯಿತೆನ್ನಲಾಗಿದೆ.
ಇದೀಗಸ್ಥಳಕ್ಕೆ ಕೊಡಗು ಸಂಪಾಜೆ ಪೊಲೀಸರು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.