




ಕಡಬ ಟೈಮ್ಸ್(KADABA TIMES):ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ವಿವಾದಿತ ದತ್ತಾತ್ರೇಯ ಪೀಠದಲ್ಲಿ ರಾಷ್ಟ್ರ ಧ್ವಜ ಹಾರಿಸಲಾಗಿದೆ.
ವಿಶ್ವಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ದತ್ತಾತ್ರೇಯ ಪೀಠದ ಮುಂಭಾಗ ರಾಷ್ಟ್ರ ಧ್ವಜ ಹಾರಿಸಿದ್ದು, ಕೇಸರಿ ರಕ್ಷೆ ಕಟ್ಟಿದ್ದಾರೆ.

ಬಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ,ಹಿಂದೂಪರ ಸಂಘಟನೆ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.ಬಾಬಾಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠ ಮೂರು ದಶಕದಿಂದ ವಿವಾದಿತ ಕೇಂದ್ರವಾಗಿದೆ.