ಬೆಳ್ಳಾರೆ ಠಾಣಾ ವ್ಯಾಪ್ತಿ: ತೋಟದಿಂದ ಲಕ್ಷ ರೂ ಮೌಲ್ಯದ ಕಾಳು ಮೆಣಸು ಕಳ್ಳತನ: ನಾಲ್ವರನ್ನು ಬಂಧಿಸಿದ ಎಸ್.ಐ ರುಕ್ಮ ನಾಯ್ಕ್ ನೇತೃತ್ವ ದ ತಂಡ

ಬೆಳ್ಳಾರೆ ಠಾಣಾ ವ್ಯಾಪ್ತಿ: ತೋಟದಿಂದ ಲಕ್ಷ ರೂ ಮೌಲ್ಯದ ಕಾಳು ಮೆಣಸು ಕಳ್ಳತನ: ನಾಲ್ವರನ್ನು ಬಂಧಿಸಿದ ಎಸ್.ಐ ರುಕ್ಮ ನಾಯ್ಕ್ ನೇತೃತ್ವ ದ ತಂಡ

Kadaba Times News

ಕಡಬ ಟೈಮ್ಸ್(KADABA TIMES):ತೋಟದ ಮನೆಯೊಂದರಿಂದ ಕದ್ದಿದ್ದ 10 ಗೋಣಿ ಕಾಳು ಮೆಣಸನ್ನು ಸಾಗಿಸುತ್ತಿದ್ದ ವೇಳೆ ಬೆಳ್ಳಾರೆ ಪೊಲೀಸರ ಕೈಗೆ ಕಳ್ಳರು ಸಿಕ್ಕಿ ಹಾಕಿಕೊಂಡ ಘಟನೆ ಜು 4 ರಂದು ನಡೆದಿದೆ .

ಸುಳ್ಯ ತಾಲೂಕಿನ ಕಳಂಜಿ ಮನೆ ನಿವಾಸಿ ಮಂಜು, ಕೊಡಿಯಭೈಲು ಮನೆ  ನಿವಾಸಿ ಪ್ರವೀಣ, ಜಾಲ್ಸೂರ ಗ್ರಾಮದ ಬರ್ಪೆಡ್ಕ್ ಮನೆ ನಿವಾಸಿ ಪವನ್ ಕುಮಾರ್ ಹಾಗು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಬ್ದುಲ್ ಬಾಶೀತ್ ಬಂಧಿತರು.

ಈ ಕೃತ್ಯದಲ್ಲಿ ಒಟ್ಟು ಐವರು ಭಾಗಿಯಾಗಿದ್ದು  ಇನ್ನೊಬ್ಬ ಅಪ್ರಾಪ್ತ ಬಾಲಕ. ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ  ಎಂಬವರ ತೋಟದಲ್ಲಿರುವ ಗೋದಾಮಿನಿಂದ 10 ಗೋಣಿ ಜೀಲದಲ್ಲಿ ತುಂಬಿಸಿಟ್ಟಿದ್ದ  250 ಕೆ.ಜಿ ಕಾಳು ಮೆಣಸನ್ನು ಜೂ 15 ರಿಂದ ಜು 3ರ ಮಧ್ಯದ ಸಮಯದಲ್ಲಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮಹಮ್ಮದ್ ಶಾಫಿ ಯವರ ತೋಟ ನೋಡಿಕೊಳ್ಳುತ್ತಿದ್ದ ಆದಂ ಕುಂಞಿ ಎಂಬವರು ಬೆಳ್ಳಾರೆ ಪೊಲೀಸು  ಠಾಣೆಗೆ ಜು.3 ರಂದು ದೂರು ನೀಡಿದ್ದರು.  ಐಪಿಸಿ  ಕಲಂ : 454,457, 380  ಪ್ರರಕಣ ದಾಖಲಾಗಿ ತನಿಖೆಯಲ್ಲಿತ್ತು.

ಬೆಳ್ಳಾರೆ ಠಾಣಾ ಪೊಲೀಸ್ ಉಪನಿರೀಕ್ಷಕರು  ಪ್ರಕರಣದ ತನಿಖೆಯನ್ನು ನಡೆಸುವ ವೇಳೆ ದೊರೆತ ಮಾಹಿತಿ ಅಧಾರದಲ್ಲಿ  ಜು .4 ರಂದು  ಅಡ್ಕಾರ್‌ ನಲ್ಲಿ ಕಾರೊಂದನ್ನು ತಡೆದು ಮಂಜು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ   ಆತ ನೀಡಿದ ಮಾಹಿತಿಯಂತೆ ಇನ್ನೊರ್ವ  ಆರೋಪಿ ಪವನ್ ಕುಮಾರ್‌ ಎಂಬಾತನ  ಮನೆಯಲ್ಲಿ ಕಳವು ಮಾಡಿ ಬಚ್ಚಿಟ್ಟಿದ್ದ 10 ಗೋಣಿ ಕಾಳು ಮೆಣಸನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು   ಸ್ವಾಧೀನ ಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಮಂಜು ಬಿ, ಪ್ರವೀಣ, ಪವನ್ ಕುಮಾರ್, ಅಬ್ದುಲ್ ಬಾಶೀತ್ ರವರನ್ನು   ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಅವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಶ್ರೀ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಗಳಾದ ಎಎಸ್‌ಐ ನಾರಾಯಣ, ಬಾಲಕೃಷ್ಣ, ನವೀನ್,  ಸತೀಶ,   ಮಂಜುನಾಥ, ಚಂದ್ರಶೇಖರ, ಪ್ರವೀಣ ಕಮಾರ್, ಶ್ರೀಶೈಲ, ಮಂಜುನಾಥ ಹೆಚ್ ಜೆ ಹಾಗೂ ವಾಹದ ಚಾಲಕರಾದ ಪುರಂದರ , ಜಿಲ್ಲಾ ಗಣಕಯಂತ್ರದ ದಿವಾಕರ , ಸಂಪತ್ ಆರೋಪಿಗಳ ಪತ್ತೆಗೆ ಸಹಕರಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top