ಟ್ಯಾಂಕರ್-ತೂಫಾನ್ ವ್ಯಾನ್ ನಡುವೆ ಅಪಘಾತ:ಚಾಲಕನಿಗೆ ಗಂಭೀರ ಗಾಯ

ಟ್ಯಾಂಕರ್-ತೂಫಾನ್ ವ್ಯಾನ್ ನಡುವೆ ಅಪಘಾತ:ಚಾಲಕನಿಗೆ ಗಂಭೀರ ಗಾಯ

Kadaba Times News

ಕಡಬ ಟೈಮ್ಸ್(KADABA TIMES):ಟ್ಯಾಂಕರ್ ಹಾಗೂ ತೂಫಾನ್ ವ್ಯಾನ್ ನಡುವೆ ನಡೆದ ಅಪಘಾತದಲ್ಲಿ ತೂಪಾನ್ ವಾಹನದ ಚಾಲಕ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ೭೫ರ ಸೂರಿಕುಮೇರು ಎಂಬಲ್ಲಿ ನಡೆದಿದೆ.

ಸೇರದಲ್ಲಿರುವ ಗೇರು ಬೀಜದ ಫ್ಯಾಕ್ಟರಿಯ ಕೆಲಸಗಾರರನ್ನು ಸಾಯಂಕಾಲದ ಅವರ ಮನೆಗೆ ಬಿಟ್ಟು ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿರಿ:ಅಕ್ರಮ ಮದ್ಯ ಸಾಗಾಟ ಪ್ರಕರಣ:ಉದನೆಯ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದ ಪುತ್ತೂರು ಕೋರ್ಟ್

ಅಪಘಾತದಿಂದಾಗಿ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ತೂಪಾನ್ ಚಾಲಕ ಸೇರಾ ನಿವಾಸಿ ಸುರೇಂದ್ರರವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ನಡೆಯುವ ಅಪಘಾತ ಗಳಿಗೆ ರಸ್ತೆ ಕಾಮಗಾರಿಯೇ ಕಾರಣ ವೆನ್ನುವ ಆರೋಪ ನಾಗರಿಕರಿಂದ ಕೇಳಿಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top