ಕಡಬ:ಮಣ್ಣು ಸಡಿಲಗೊಂಡು ವಿದ್ಯಾನಗರ ಬಳಿ ಶಾಲೆಯ ತಡೆಗೋಡೆ ಕುಸಿತ

ಕಡಬ:ಮಣ್ಣು ಸಡಿಲಗೊಂಡು ವಿದ್ಯಾನಗರ ಬಳಿ ಶಾಲೆಯ ತಡೆಗೋಡೆ ಕುಸಿತ

Kadaba Times News

ಕಡಬ ಟೈಮ್ಸ್(KADABA TIMES):ಕಡಬ: ಎಡಬಿಡದೆ ಸುರಿದ ಅಬ್ಬರದ ಮಳೆಗೆ ಕಡಬ-ಪಂಜ ರಸ್ತೆಯ ವಿದ್ಯಾನಗರದಲ್ಲಿ ಶಾಲೆಯೊಂದರ ತಡೆಗೊಡೆ ಕುಸಿದು ಬಿದ್ದಿದೆ.

ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯು ತಮ್ಮ ಶಾಲಾ ವಠಾರದಲ್ಲಿದ್ದ ಶಿಶು ಮಂದಿರದ ಬಳಿ ತಡೆಗೋಡೆ ನಿರ್ಮಿಸಿತ್ತು. ಇದೀಗ ನಿರಂತ ಮಳೆಗೆ ರಸ್ತೆ ಸಮೀಪವಿದ್ದ  ತಡೆಗೋಡೆ ಮಣ್ಣು ಸಡಿಲಗೊಂಡು ಪೂರ್ತಿಯಾಗಿ ವಾಲಿಕೊಂಡಿದೆ.

ಈ ಸುದ್ದಿಯನ್ನೂ ಓದಿರಿ:ಯಕ್ಷಗಾನದ ಹಿರಿಯ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ

ಪಿಲ್ಲರ್ ಅಳವಡಿಸದೆ ತಡೆಗೋಡೆ ನಿರ್ಮಾಣ ಮಾಡಿರುವುದೇ ಈ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಳೆ ಮತ್ತೆ ಮುಂದುವರಿದಲ್ಲಿ ತಡೆಗೋಡೆ ಮಾರ್ಗಕ್ಕೆ ಬೀಳುವ ಆತಂಕ ಹೆಚ್ಚಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top