




ಕಡಬ ಟೈಮ್ಸ್(KADABA TIMES):ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನನ್ನು ಸ್ನೇಹಿತರಿಬ್ಬರು ಸೇರಿಕೊಂಡು ಮಾರಕಾಸ್ತ್ರಗಳಿಂದ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧ ಪಟ್ಚಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಕೈಕಂಬದ ತಲಪಾಡಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಜುಲೈ 4 ರಂದು ಮಧ್ಯ ರಾತ್ರಿ 1 ಗಂಟೆ ವೇಳೆಗೆ ತಲಪಾಡಿ ಹೋಟೆಲ್ ಒಂದರ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ್ದರು.
ಬಂಟ್ವಾಳ ಮಾರಿಪಳ್ಳ ನಿವಾಸಿಗಳಾದ ಮಹಮ್ಮದ್ ನೌಫಾಲ್ ಹಾಗೂ ಮಹಮ್ಮದ್ ನೌಶೀರ್ ಎಂಬವರು ಬಂಧಿತ ಆರೋಪಿಗಳಾಗಿದ್ದು ಇವರಿಬ್ಬರೂ ಕೊಲೆಯಾದ ಮಹಮ್ಮದ್ ಆಶಿಫ್ ಎಂಬಾತನ ಸ್ನೇಹಿತರಾಗಿದ್ದಾರೆ.

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಬಂಟ್ವಾಳ ನಗರ ಠಾಣಾ ಪೋಲೀಸ್ ಆರೋಪಿಗಳನ್ನು ಬಂಧಿಸಿದ್ದಾರೆ.