




ಕಡಬ ಟೈಮ್ಸ್(KADABA TIMES):ತೀವ್ರ ರಕ್ತದ ಒತ್ತಡದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿ ಕೊನೆಯುಸಿರೆಳೆದ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪ್ರಸನ್ನ ಕಾಲೇಜಿನಲ್ಲಿ ಅಂತಿಮ ವರ್ಷದ ಐಟಿಐ ವಿದ್ಯಾರ್ಥಿ , ಬಾರ್ಯ ಗ್ರಾಮದ ಗಿರಿಗುಡ್ಡೆ ನಿವಾಸಿ ಸುಮಂತ್ (20) ಮೃತಪಟ್ಟ ದುರ್ದೈವಿ.

ಕಳೆದ ಒಂದು ವಾರದ ಹಿಂದೆ ಕಾಲೇಜಿನಲ್ಲಿ ಬಿದ್ದಿದ್ದ ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.