




ಕಡಬ ಟೈಮ್ಸ್(KADABA TIMES):ಮಂಗಳೂರಿನಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತಯರು ಅಲರ್ಟ್ ಆಗಿದ್ದು ನಗರದ ಬಲ್ಮಠ ದ ಪಬ್ ಮೇಲೆ ದಾಳಿ ಮಾಡಿ ವಿದ್ಯಾರ್ಥಿಗಳ ವಿದಾಯಕೂಟಕ್ಕೆ ಅಡ್ಡಿ ಪಡಿಸಿ ಬ್ರೇಕ್ ಹಾಕಿದ್ದಾರೆ.
ಪಬ್ನಲ್ಲಿ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿದ್ದ ಈ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ಎನ್ನಲಾದ ತಂಡ ತಡೆಯೊಡ್ಡಿದ್ದು, ಪಾರ್ಟಿಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪಬ್ನಿಂದ ಹೊರಗೆ ಕಳುಹಿಸಿದ್ದಾರೆ.ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ನಲ್ಲಿ ಪಾರ್ಟಿ ನಡೆಯುತ್ತಿತ್ತು ಎನ್ನಲಾಗಿದೆ

ಘಟನೆಯ ಬಳಿಕ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪಬ್ನ ಮಾಲಿಕ ಮುಂಬೈ ಮೂಲದವರು ಸಿಸಿಟಿವಿಯ ಪರಿಶೀಲನೆ ಅವರನ್ನು ಸಂಪರ್ಕಿಸುತ್ತಿದ್ದೇವೆ. ಇಲ್ಲಿ ಭಾಗಿಯಾದ ಕೆಲವು ವಿದ್ಯಾರ್ಥಿಗಳನ್ನು ಕಾಲೇಜು ಮೂಲಕ ಸಂಪರ್ಕಿಸಿದ್ದೇವೆ. ಅವರಿಂದ ಮಾಹಿತಿ ಪಡೆಯುತ್ತಿದ್ದೇವೆ. ಘಟನೆ ಬಗ್ಗೆ ಸಿಸಿಟಿವಿ ಪರಿಶೀಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.