




ಕಡಬ ಟೈಮ್ಸ್(KADABA TIMES):ಮಟನ್ ಸ್ಟಾಲ್ ನಡೆಸುತ್ತಿದ್ದ ಹಿರೇಬಂಡಾಡಿ ಗ್ರಾಮದ ಬೋಳಮೆ ನಿವಾಸಿ ಮಹಮ್ಮದ್ ಶರೀಫ್(40ವ)ರವರು ನಾಪತ್ತೆಯಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಶರೀಫ್ ರವರು ಕುಂಬ್ರದಲ್ಲಿ ಕೊಡಿಪ್ಪಾಡಿ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮಾಲಕತ್ವದ ಮಟನ್ ಸ್ಟಾಲ್ ನಡೆಸುತ್ತಿದ್ದರು. ಜು.3ರಂದು ಅವರು ರಾತ್ರಿ ಪತ್ನಿ ಅವರನ್ನು ಮೊಬೈಲ್ ಮೂಲಕ ಸಂಪರ್ಕ ಮಾಡಿದ್ದರು. ಆದರೆ ಸಂಪರ್ಕಕ್ಕೆ ಸಿಗಲಿಲ್ಲ.

ಈ ಕುರಿತು ಅವರು ಕೊಡಿಪ್ಪಾಡಿಯಲ್ಲಿರುವ ಸಂಬಂಧಿಕರಲ್ಲೂ ವಿಚಾರಿಸಿದಾಗ ಗಂಡನ ಪತ್ತೆಯಾಗಿರಲಿಲ್ಲ. ಕೊನೆಗೆ ಬಕ್ರೀದ್ ಹಬ್ಬದ ಸಂದರ್ಭವಾದರೂ ಗಂಡ ಬರಬಹುದು ಎಂದು ಕಾದು ಅಂದೂ ಬಾರದಿದ್ದಾಗ ಪತ್ನಿ ತಂಶಿಯಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.