




ಕಡಬ ಟೈಮ್ಸ್(KADABA TIMES):ಕಡಬ: ಇಲ್ಲಿನ ಮೆಸ್ಕಾಂ ಇಲಾಖೆಯ ನೂತನ ಜೆ.ಇ ವಸಂತ ಕುಮಾರ್ ಟಿ.ಎಂ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಸುಳ್ಯದ ಹರಿಹರ ಪಲ್ಲತ್ತಡ್ಕದಲ್ಲಿ ಕಳೆದ 12 ವರ್ಷಗಳಿಂದ ಗ್ರೇಡ್ ಸೆಕೆಂಡ್ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನೂತನ ಅಧಿಕಾರಿಗೆ ಎ.ಇ.ಇ ಸಜಿಕುಮಾರ್ ಮತ್ತು ಎ.ಇ ಸತ್ಯನಾರಾಯಣ ಸಿ.ಕೆ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಲೆಕ್ಕಾಧಿಕಾರಿ ಕೃಷ್ಣ ಮೂರ್ತಿ ಮತ್ತು ಕಡಬ ಉಪವಿಭಾಗದ ಬಿಳಿನೆಲೆ, ಆಲಂಗಾರು, ನೆಲ್ಯಾಡಿಯ ಎಲ್ಲಾ ಶಾಖಾ ಅಧಿಕಾರಿಗಳು ಮತ್ತು ಉಪವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.