




ಕಡಬ ಟೈಮ್ಸ್(KADABA TIMES):ಕಡಬ ಮುಖ್ಯ ಪೇಟೆಯಲ್ಲಿ ರಸ್ತೆಗೆ ಬಾಗಿರುವ ಬೃಹತ್ ಮರವೊಂದರ ರೆಂಬೆಗಳು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸಾಧ್ಯತೆಗಳಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.
ಕಡಬ ಠಾಣಾ ಜಾಗದ ಸಮೀಪ (ಬಸ್ ತಂಗುದಾಣದ ಎದುರು ) ರಸ್ತೆಯ ಬದಿಯಲ್ಲಿರುವ ಈ ಮರದ ಉದ್ದನೆಯ ರೆಂಬೆಗಳು ರಸ್ತೆಯತ್ತ ಚಾಚಿ ಕೊಂಡಿದ್ದು, ಅದರ ಕೆಳಗೆ ವಿದ್ಯುತ್ ಲೈನ್ ಕೂಡ ಹಾದುಹೋಗುತ್ತಿದೆ.
ಉಪ್ಪಿನಂಗಡಿ -ಕಡಬದ ಮೂಲಕ ಸುಬ್ರಹ್ಮ ಣ್ಯದತ್ತ ತೆರಳುವ ಸರಕಾರಿ ಬಸ್ ಗಳು ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲು ಇದೇ ಮರದಡಿಯಲ್ಲಿ ನಿಲ್ಲುತ್ತಿವೆ. ಮರದ ಕೆಳಗೆ ಗೂಡಂಗಡಿಗಳು ಕೂಡ ಇದ್ದು, ಸದಾ ಇಲ್ಲಿ ಜನರು ಓಡಾಡುತ್ತಿರುತ್ತಾರೆ. ಮರ ಅಥವಾ ಅದರ ರೆಂಬೆಗಳು ಮುರಿದುಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಕೂಡಲೇ ಪ.ಪಂ. ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರೆಂಬೆಯನ್ನಾದರೂ ತೆರವುಗೊಳಿಸಬೇಕೆಂದು ಕಡಬ ಕದಂಬ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ಆಗ್ರಹಿಸಿದ್ದಾರೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಮೆಸ್ಕಾಂ ಎಇಇ ಸಜಿಕುಮಾರ್, ಪ.ಪಂ. ವತಿಯಿಂದ ಮರದ ರೆಂಬೆಗಳನ್ನು ತೆರವುಗೊಳಿಸುವುದಾದರೆ ಆ ಸಂದ ರ್ಭದಲ್ಲಿ ಮರದ ಕೆಳ ಭಾಗದಿಂದ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ತೆಗೆದುಕೊಡುವುದಾಗಿ ತಿಳಿಸಿದ್ದಾರೆ.ಇನ್ನು ಪ.ಪಂ ಮುಖ್ಯಾಧಿಕಾರಿ ಪಕೀರ ಮೂಲ್ಯ ಪ್ರತಿಕ್ರಿಯೆ ನೀಡಿ ಮೆಸ್ಕಾಂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಮರದ ಅಪಾಯಕಾರಿ ರೆಂಬೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.