




ಕಡಬ ಟೈಮ್ಸ್(KADABA TIMES):ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರಡು ಕಡೆಗಳಲ್ಲಿ ಕೆಂಪು ಮಳೆ ಸುರಿದು ಅಚ್ಚರಿಗೆ ಕಾರಣವಾಗಿದೆ.
ಕಲ್ಮಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡಿಗಲ್ ಮತ್ತು ಕಲ್ಮಂಜ ವ್ಯಾಪ್ತಿಯ ಗಡಿಕಲ್ಲು ಶಾನುಭೋಗ್ ನಿವಾಸಿ ದಿವಾಕರ ಗೌಡ ಎಂಬವರ ಮನೆಯ ಪರಿಸರದಲ್ಲಿ ಕೆಂಪು ಮಳೆ ಸುರಿದಿದೆ.

ನಿಡುಗಲ್ಲು ಪ್ರದೇಶದ ಜನರು ಕೆಂಪು ಮಡಳೆಯನ್ನು ವೀಕ್ಷಿಸಿ ಆಶ್ಚರ್ಯಚಕಿತರಾಗಿದ್ದಾರೆ. ಇನ್ನು ಶಿರ್ಲಾಲು ಎಂಬ ಪ್ರದೇಶದಲ್ಲಿ ಕೂಡಾ ಕೆಂಪು ಮಳೆ ಸುರಿದಿದೆ.
ಹವಾಮಾನ ಇಲಾಖೆಯ ತಜ್ಞರ ಅಧ್ಯಯನದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.