




ಕಡಬ ಟೈಮ್ಸ್(KADABA TIMES):ಕಡಬ: ಪಂಜ- ಕಡಬ ರಸ್ತೆಯಲ್ಲಿ ಬೊಳ್ಳಾಜೆ ಕ್ರಾಸ್ ಬಳಿ ಭಾರಿ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದುದ್ದು ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ಜು.13 ರಂದು ವರದಿಯಾಗಿದೆ.
ಭಾರಿ ಗಾಳಿಗೆ ಮರ ಉರುಳಿ ರಸ್ತೆಗೆ ಬಿದ್ದಿದ್ದು ಪಂಜ ಅರಣ್ಯ ಇಲಾಖೆಯವರು ಮರವನ್ನು ತೆರವು ಗೊಳಿಸಿದ್ದಾರೆ .ಮರ ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಲೈನ್ ದುರಸ್ಥಿ ಪಡಿಸಿದರು.

ಎ.ಸಿ.ಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ರವಿಪ್ರಕಾಶ್, ಅರಣ್ಯ ರಕ್ಷಕ ಮಹೇಶ್ ಕೊಳ್ಳಿ ಸಿಬ್ಬಂದಿಗಳು, ಮೆಸ್ಕಾಂ ಇಲಾಖೆಯ ಅಧಿಕಾರಿ ಹರಿಕೃಷ್ಣ , ಸಿಬ್ಬಂದಿಗಳು ಉಪಸ್ಥಿತರಿದ್ದರು.