




ಕಡಬ ಟೈಮ್ಸ್(KADABA TIMES):ಸವಣೂರು: ಹುಚ್ಚು ನಾಯಿ ಕಡಿತಕ್ಕೊಳಗಾಗಿ ಇಬ್ಬರು ಗಾಯಗೊಂಡಿರುವ ಘಟನೆ ಕಡಬ ತಾಲೂಕಿನ ಸವಣೂರು ಸಮೀಪದ ಶಾಂತಿನಗರದಲ್ಲಿ ನಡೆದಿದೆ.
ಶಾಂತಿನಗರದ ಸಮೀರ್ ಹಾಗೂ ಹಸೈನ್ ಎಂಬವರು ಹುಚ್ಚು ನಾಯಿ ಕಡಿತಕ್ಕೊಳಗಾಗಿದ್ದು ಸ್ಥಳೀಯವಾಗಿ ಎರಡು ಆಡುಗಳಿಗೆ ಹಾಗೂ ಬೆಕ್ಕುಗಳಿಗೆ ಇದೇ ಹುಚ್ಚು ನಾಯಿ ಕಡಿದಿರುವುದಾಗಿ ತಿಳಿದು ಬಂದಿದೆ.

ಮಗುವಿನ ಮೇಲೆ ನಾಯಿ ದಾಳಿ ಮಾಡಿದ ಸಂದರ್ಭ ಮಗುವನ್ನು ರಕ್ಷಿಸುವ ಸಂದರ್ಭ ಓರ್ವನಿಗೆ ನಾಯಿ ಕಚ್ಚಿ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಶಾಲೆ, ಮದರಸಗಳಿಗೆ ತೆರಳುವ ಮಕ್ಕಳು ಭಯಭೀತಗೊಂಡಿದ್ದು ಹುಚ್ಚು ನಾಯಿ ರಂಪಾಟದಿಂದ ಸ್ಥಳೀಯರು ಭಯಭೀತಗೊಂಡಿದ್ದು ಮನೆಯಿಂದ ಹೊರಬರಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯ ಗ್ರಾಮ ಪಂಚಾಯತ್ ಈ ಬಗ್ಗೆ ತುರ್ತು ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.