




ಕಡಬ ಟೈಮ್ಸ್(KADABA TIMES):ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಪಲ್ಲತಡ್ಕ ಎಂಬಲ್ಲಿ ಮಳೆ ನೀರಿನೊಂದಿಗೆ ಕೊಚ್ಚಿ ಬಂದ ಬೃಹತ್ ಮರ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದೆ.
ಬೃಹತ್ ಗಾತ್ರದ ಮರ ಸಿಲುಕಿಗೊಂಡಿರುವುದರಿಂದ ಕಿಂಡಿ ಅಣೆಕಟ್ಟಿಗೆ ಅಪಾಯ ತಂದೊಡ್ಡಿದೆ. ಅಲ್ಲದೆ ಸ್ಥಳೀಯರ ತೋಟಗಳಿಗೂ ನೀರು ನುಗ್ಗಿದ್ದು, ತೋಟದಲ್ಲಿ ಹಾಕಿರುವ ಗೊಬ್ಬರ ನೀರುಪಾಲಾಗಿದೆ.
ಈ ಸುದ್ದಿಯನ್ನೂ ಓದಿರಿ:Latest News: ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಜುಲೈ 10ವರೆಗೆ ತೀವ್ರ ಮಳೆ

ನಿರಂತರವಾಗಿ ಸುರಿದ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ಸ್ಥಳೀಯ ತೋಟಗಳು ನೀರುಪಾಲಾಗುವ ಭೀತಿ ಎದುರಾಗಿದೆ.ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಗ್ರಾ.ಪಂ.ಸದಸ್ಯರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿರಿ:ಸಂಸದರ ಆದರ್ಶ ಗ್ರಾಮದಲ್ಲಿ 2 ಕೋಟಿ ಅನುದಾನದಲ್ಲಿ ಕೆರೆ ಅಭಿವೃದ್ಧಿ:ಮಹಾ ಮಳೆಗೆ ಕೆರೆ ಪಾಲಾದ ಆವರಣ ತಡೆಗೋಡೆ