




ಕಡಬ ಟೈಮ್ಸ್(KADABA TIMES):ಟಾಟಾ ಏಸ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಕುಂತೂರಿನ ಪದವು ಸಮೀಪದ ಎರ್ಮಾಳ ಎಂಬಲ್ಲಿ ಶುಕ್ರವಾರ ಅಪರಾಹ್ನ ನಡೆದಿದೆ.
ಚಾಲಕ ಮರ್ಧಾಳ ಸಮೀಪದ ಸುಳ್ಯ ಮೇಪತ್ತಪಾಲು ನಿವಾಸಿ ಹರೀಶ್ ಗಾಯಗೊಂಡವರು.

ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಪದವು ಸಮೀಪದ ಎರ್ಮಾಳ ಎಂಬಲ್ಲಿ ಈ ಘಟನೆ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.