




ಕಡಬ ಟೈಮ್ಸ್(KADABA TIMES):ಕರಾವಳಿ ಜಿಲ್ಲೆಯ ಹಲವೆಡೆ ಕೆಲ ದಿನಗಳಿಂದ ಮಳೆಯಾಗುತ್ತಿದ್ದು ಇಂದು ಮಧ್ಯಾಹ್ನದ ಬಳಿಕ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದೆ.
ಕಡಬ ಪರಿಸರದಲ್ಲೂ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ವಾರದ ಸಂತೆಗೂ ತೊಂದರೆಯಾಗಿದ್ದು ಜನರಿಲ್ಲದೆ ಬಿಕೋ ಎನ್ನುವಂತಿದೆ. ಇನ್ನು ಗಾಳಿ ಮಳೆಯಿಂದಾಗಿ ಸಂತೆಯ ಕೆಲ ಅಂಗಡಿಗಳಿಗೆ ಮಳೆ ನೀರು ಚಿಮ್ಮಿದೆ.

ಜಿಲ್ಲೆಯಲ್ಲಿ ೧೪೪ ಸೆಕ್ಷನ್ ಜಾರಿ ಇರುವುದರಿಂದ ಜನರು ಬೇಗ ಮಳೆ ಸೇರುವ ಧಾವಂತದಲ್ಲಿದ್ದರೂ ಮಳೆಯಿಂದಾಗಿ ಓಡಾಟಕ್ಕೂ ಅಡಚಣೆಯಾಗಿದೆ.ಕಡಬ,ಸುಬ್ರಹ್ಮಣ್ಯ,ಉಪ್ಪಿನಂಗಡಿ, ನೆಲ್ಯಾಡಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಇಂದು ಭಾರೀ ಗಾಳಿ ಮಳೆಯಾಗಿರುವುದಾಗಿ ತಿಳಿದು ಬಂದಿದೆ.