




ಕಡಬ ಟೈಮ್ಸ್(KADABA TIMES):ದೀಪಕ್ ವಿಟ್ಲ: ಸಾಧನೆಗೆ ನಮ್ಮ ಕೆಲಸಗಳು ಅಡ್ಡಿಯಾಗದು, ಯಾವುದಾರೂ ಒಂದು ಕ್ಷೇತ್ರದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಸಾಮಾಜಿಕವಾಗಿ ನಮಗೆ ಗೌರವಗಳು ಸಿಗುತ್ತವೆ.ಇದಕ್ಕೆ ನಿದರ್ಶನವಾಗಿ ನಮಗೆ ಯುವ ಕರಾಟೆ ಸಾಧಕ ನಮ್ಮ ಮುಂದೆ ಬರುತ್ತಾರೆ.
ಹೌದು, ರಾಷ್ಟ್ರಮಟ್ಟದ ಕರಾಟೆಯಲ್ಲಿ ಮಿಂಚಿ ಊರಿಗೆ ಕೀರ್ತಿ ತಂಡುಕೊಟ್ಟ ಇವರು ಹೆಸರು ಶಶಿಕಿರಣ್. ಕಟೀಲಿನ ಎಕ್ಕಾರಿನಲ್ಲಿ ಜನಿಸಿದ ಇಅವರು ಶ್ರೀ ಮತಿ ಜಯಂತಿ ಮತ್ತು ಉಮೇಶ್ ದಂಪತಿಗಳ ಪುತ್ರ.
ಕರಾಟೆ ಶಿಕ್ಷಕರಾದ ಈಶ್ವರ್ ಕಟೀಲ್ ಮತ್ತು ಮೊರ್ಗನ್ ರವರಿಂದ ಉತ್ತಮ ತರಬೇತಿಯನ್ನು ಪಡೆದು ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಯಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಸುತ್ತಮುತ್ತಲಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಕರಾಟೆ ತರಬೇತಿ ನೀಡಿ ಯುವ ಮನಸುಗಳಿಗೆ ಸ್ಪೂರ್ತಿಯಾಗಿದ್ದಾರೆ.

ಇನ್ನು ತಾಲೀಮು ವ್ಯಾಯಾಮ ಶಾಲೆಯಲ್ಲಿ 8ವರ್ಷ ಎಲ್ಲಾ ವಿಧದ ವಿದ್ಯೆ ಅಭ್ಯಾಸ ಮಾಡಿ ಗುರುಗಳಾದ ಚಂದ್ರಹಾಸ್ ಕುಂದರ್ ಮತ್ತು ಬಾಕ್ಸಿಂಗ್ ಗುರುಗಳಾದ ವೀರ ಯೋಧ ರಾಜೇಶ್ ಉರ್ವ ಅವರ ಮೆಚ್ಚಿನ ಶಿಷ್ಯರಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಕಾರ್ಯಚಟುವಟಿಕ್ಯಲ್ಲಿ ತೊಡಗಿಕೊಂಡ ಇವರು ಸಂಘದ ವಿವಿಧ ಸಾಮಾಜಿಕ ಜಾವಾಬ್ದರಿಗಳನ್ನು ನಿಭಾಸುವುದರ ಜೊತೆಗೆ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ.
ಪ್ರಾಥಮಿಕದಿಂದ ಹಿಡಿದು ಕಾಲೇಜು ಶಿಕ್ಷಣವನ್ನು ಹುಟ್ಟೂರಾದ ಕಟೀಲಿನಲ್ಲೇ ಪೂರೈಸಿದ್ದಾರೆ. ಕಂಪ್ಯೂಟರ್ ಶಿಕ್ಷಣವನ್ನು ಕಿನ್ನಿಗೋಳಿಯ ನಾರಾಯಣ ಗುರು ಶಾಲಾ ದಲ್ಲಿ ಅಭ್ಯಾಸಿಸಿ ಕರಗತ ಮಾಡಿಕೊಂಡಿದ್ದಾರೆ. ಕರಾಟೆಯಲ್ಲಿ ಸಾಧನೆ ಮಾಡಲು ಹೊರಟ ಈ ಯುವ ಸಾಧಕನಿಗೆ ನಾವೆಲ್ಲರೂ ಪ್ರೋತ್ಸಾಹ ನೀಡೋಣ.