




ಕಡಬ ಟೈಮ್ಸ್(KADABA TIMES):ಕಡಬ/ಕುಟ್ರುಪ್ಪಾಡಿ:ಮಧ್ಯರಾತ್ರಿ ಬಾಗಿಲು ಬಡಿದು ದಿಢೀರ್ ಮನೆಯೊಳಗೆ ಬಂದ ಪೊಲೀಸರನ್ನು ಕಂಡು ಮನೆ ಮಂದಿ ಗಲಿಬಿಲಿಗೊಂಡಿರುವ ಘಟನೆಯ ವರದಿ ಬೆನ್ನಲ್ಲೇ ಇನ್ನೂ ಕೆಲ ಮನೆಗಳಿಗೆ ಪೊಲೀಸರು ಬಂದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮನೆಗೆ ಬಂದಿರುವ ಪೊಲೀಸರಲ್ಲಿ ಬಂದಿರುವ ಕಾರಣ ಕೇಳಿದಾಗ ಏನೂ ಹೇಳದೇ ಹೊರಟು ಹೋದ ಕಾರಣ ಮನೆ ಮಂದಿಯಲ್ಲಿ ಆತಂಕ ಎದುರಾಗಿತ್ತು.ಗ್ರಾಮದ ಕೆಲ ಮನೆಯವರಲ್ಲೂ ಆತಂಕ ಮನೆ ಮಾಡಿತ್ತು.
ಈ ಸುದ್ದಿ ಓದಿರಿ:ಕಡಬ:ಮಿಡ್ ನೈಟ್ ಮನೆಯೊಳಗೆ ಎಂಟ್ರಿಕೊಟ್ಟ ಖಾಕಿಧಾರಿಗಳು: ನಿದ್ದೆ ಮಂಪರಿನಲ್ಲಿದ್ದ ಮನೆ ಮಂದಿ ಗಲಿಬಿಲಿ!

ಈ ಘಟನೆಗೆ ಸಂಬಧಿಸಿದಂತೆ ಕಡಬ ಠಾಣೆಯಿಂದ ಸ್ಪಷ್ಟನೆ ಸಿಕ್ಕಿದ್ದು ತನಿಖಾ ತಂಡದ ಪಿಎಸ್ಐ ಹಾಗೂ ಸಿಬ್ಬಂದಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಯಾರೋ ಒಬ್ಬಾತ ಪೊಲೀಸರನ್ನು ಕಂಡು ಓಡಲಾರಂಭಿಸಿದ .ಹೀಗಾಗಿ ಆತನನ್ನು ಹಿಂಬಾಲಿಸಿದ್ದಾರೆ. ಆ ವ್ಯಕ್ತಿ ಮನೆಯೊಂದರ ಸಮೀಪ ಬಂದು ಕಣ್ಮರೆಯಾಗಿದ್ದ. ಈ ಕಾರಣದಿಂದ ಇಲ್ಲಿನ ಕೆಲವು ಮನೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜನರು ಆತಂಕ ಪಡುವ ಅಗತ್ಯವೇ ಇಲ್ಲ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿರಿ:ಕಡಬದಲ್ಲಿ ಸ್ವಯಂಪ್ರೇರಿತ ಬಂದ್ ಗೆ ಮುಂದಾದ ವರ್ತಕರು
ಗ್ರಾಮಸ್ಥರು ಅಲರ್ಟ್: ಇನ್ನು ಗ್ರಾಮದ ಮನೆಗಳಿಗೆ ರಾತ್ರಿ ಪೊಲೀಸರು ಬಂದ ಬಳಿಕ ಗ್ರಾಮಸ್ಥರೂ ಅಲರ್ಟ್ ಆಗಿದ್ದು ಬಜೆತ್ತಡ್ಕ ಮಾರ್ಗದಲ್ಲಿ ತಡರಾತ್ರಿ ಬರುವ ವ್ಯಕ್ತಿ,ವಾಹನಗಳ ಮೇಲೆ ನಿಗಾವಹಿಸಿದ್ದಾರೆ. ಈ ಘಟನೆ ನಡೆದ ಬಳಿಕ ಆ ಭಾಗದ ಯುವಕರ ತಂಡ ಮಾಹಿತಿ ಕಲೆ ಹಾಕುವಲ್ಲಿ ಸಕ್ರಿಯವಾಗಿದೆ.ಇದೇ ಭಾಗದಲ್ಲಿ ಈ ಹಿಂದೆ ಹಲವು ಸೋಲಾರ್ ಲೈಟ್ ಗಳು ಕಳವಾಗಿತ್ತು.