




ಕಡಬ ಟೈಮ್ಸ್(KADABA TIMES):ಆಕಸ್ಮಿಕವಾಗಿ ಬೆಂಕಿ ಅವಘಡದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಜುಲೈ ೨೩ ರಂದು ಬೆಳ್ಳಾರೆಯಲ್ಲಿ ಸಂಭವಿಸಿದೆ.
ಕಳಂಜ ಗ್ರಾಮದ ಬಾಳೆಗುಡ್ಡೆ ಕುಂಞಣ್ಣ ನಾಯ್ಕರ ಪುತ್ರಿ ಕುಸುಮರವರು ಜು. 20ರಂದು ಬೆಳಿಗ್ಗೆ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನೊಪ್ಪಿರುವುದಾಗಿ ತಿಳಿದು ಬಂದಿದೆ

. ಮೃತರ ಅಂತ್ಯ ಸಂಸ್ಕಾರ ಜು. 24ರಂದು ನಡೆಯಲಿದೆಯೆಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.