




ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿತ್ತೊಟ್ಟು, ಕೊಣಾಲು ಹಾಗೂ ಆಲಂತಾಯ ಗ್ರಾಮದಲ್ಲಿ ಮುಂದಿನ 1 ವರ್ಷದ ಅವಧಿಗೆ ಹಸಿ ಮೀನು ಮಾರಾಟದ ಹಕ್ಕಿನ ಏಲಂ ಪ್ರಕ್ರಿಯೆ ಜು.೧೨ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಟೋಮಿ ನೆಲ್ಯಾಡಿಯವರು ೫೯,೧೦೦ ರೂಪಾಯಿಗೆ ಮಾರಾಟದ ಹಕ್ಕು ಪಡೆದುಕೊಂಡರು. ಪ್ರಸಾದ್ ಕೆ.ಪಿ.ಸುಲ್ತಾಜೆ, ಅಬ್ದುಲ್ ರಝಾಕ್ ಮರ್ಲಾಪುರವರು ಬಿಡ್ಡುದಾರರಾಗಿದ್ದರು.ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾಲತಾ, ಪಿಡಿಒ ಜಗದೀಶ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಚಂದ್ರಾವತಿಯವರು ಏಲಂ ಪ್ರಕ್ರಿಯೆ ನಡೆಸಿಕೊಟ್ಟರು. ಸದಸ್ಯರುಗಳಾದ ಕೆ.ಬಾಬು ಪೂಜಾರಿ, ಶಿವಪ್ರಸಾದ್, ಬಾಲಕೃಷ್ಣ ಅಲೆಕ್ಕಿ, ನೋಣಯ್ಯ ಗೌಡ, ಹೇಮಲತಾ, ಶೃತಿ ಪಿ., ಗುಲಾಬಿ, ಸವಿತಾ ಆಲಂತಾಯ, ಸಂಧ್ಯಾ, ವಾರಿಜಾಕ್ಷಿ, ವಿ.ಸಿ.ಜೋಸೆಫ್, ನೀರು ನಿರ್ವಾಹಕರಾದ ಗಣೇಶ್ ಬೊಟ್ಟಿಮಜಲು, ಶೀನಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಬಾಬು ನಾಯ್ಕ್, ಪುಷ್ಪಾ ಜಯಂತ್, ದಿನೇಶ್, ಯಶವಂತ, ಕೀರ್ತಿಕಾ ಸಹಕರಿಸಿದರು.