




ಕಡಬ ಟೈಮ್ಸ್(KADABA TIMES):ಬೆಳ್ಳಾರೆಯ ಉದ್ಯಮಿ ಪ್ರವೀಣ್ ನೆಟ್ಟಾರು ಹತ್ಯೆಯ ಹಿನ್ನೆಲೆ ಯೇನೆಕಲ್ಲಿನ ಎರಡು ಅಂಗಡಿಗಳನ್ನು ಇಂದು ಸಂಜೆ ಧ್ವಂಸ ಮಾಡಿರುವುದಾಗಿ ತಿಳಿದುಬಂದಿದೆ.
ಬೆಳಿಗ್ಗೆ ಗುತ್ತಿಗಾರಿನಲ್ಲಿ ಅಡಿಕೆ ಅಂಗಡಿ ಧ್ವಂಸ ಮಾಡಿದ ಘಟನೆ ಬೆನ್ನಲ್ಲೇ ಸಂಜೆ ಯೇನೆಕಲ್ಲಿನ ಎರಡು ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ. ಯೇನೆಕಲ್ಲಿನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿರುವ ಬಳ್ಪದ ಖಾದರ್ ಮತ್ತು ಖಲೀಲರ ಜಿನಸು ಅಂಗಡಿಯನ್ನು ನಾಶ ಮಾಡಿರುವುದಾಗಿ ತಿಳಿದುಬಂದಿದೆ.

ಅಡಿಕೆ ಅಂಗಡಿಯ ಒಳಗಿದ್ದ ಅಡಿಕೆ ಮತ್ತು ಜಿನಸು ಅಂಗಡಿಯಲ್ಲಿ ಜಿನಸು ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿದೆ. ಇದರೊಂದಿಗೆ ಖಾದರ್ ರವರ ಜೀಪಿನ ಚಕ್ರಗಳ ಗಾಳಿ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.