ಅಂಗಡಿ ಬಂದ್ ಮಾಡುತ್ತಿದ್ದಾಗ ತಲೆಗೆ ಹೊಡೆದ ಅಪರಿಚಿತರು:ಅಸ್ವಸ್ಥಗೊಂಡ ಗುತ್ತಿಗಾರಿನ ಯುವಕ ಆಸ್ಪತ್ರೆಗೆ ದಾಖಲು

ಅಂಗಡಿ ಬಂದ್ ಮಾಡುತ್ತಿದ್ದಾಗ ತಲೆಗೆ ಹೊಡೆದ ಅಪರಿಚಿತರು:ಅಸ್ವಸ್ಥಗೊಂಡ ಗುತ್ತಿಗಾರಿನ ಯುವಕ ಆಸ್ಪತ್ರೆಗೆ ದಾಖಲು

Kadaba Times News

ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ/ಗುತ್ತಿಗಾರು: ಬಿಜೆಪಿ ಯುವ ಮುಖಂಡನ ಕೊಲೆಯ ಬಳಿಕ ಕೆಲ ಕಡೆ ಅಹಿತಕರ ಘಟನೆ ನಡೆದಿದ್ದು ಗುತ್ತಿಗಾರಿನ ವ್ಯಕ್ತಿಯೊಬ್ಬರ ತಲೆಗೆ ಹೊಡೆದ ಪರಿಣಾಮ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.

ಗುತ್ತಿಗಾರಿನ   ನ್ಯೂ ಸ್ಟಾರ್ ಬೇಕರಿ  ಮಾಲಕ ಬಶೀರ್ ಗಾಯಗೊಂಡವರು.   ಜುಲೈ28 ರಂದು ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಹಿಂದೂ ಸಂಘಟನೆಗಳ ಯುವಕರ ತಂಡ ಗುತ್ತಿಗಾರು ಕೆನರಾ ಬ್ಯಾಂಕ್ ಬಳಿ ಜಮಾಯಿಸಿ  ಬೇಕರಿ ಮಾಲಕ ಬಶೀರ್ ರವರಿಗೆ ಅಂಗಡಿ ಬಂದ್ ಮಾಡಲು ಹೇಳಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿರಿ:Supreme court order:ವಾರದೊಳಗೆ ಮೀಸಲಾತಿ ಪ್ರಕಟಿಸಿ, ಚುನಾವಣೆ ಪ್ರಕ್ರಿಯೆ ಆರಂಭಿಸಲು ಸೂಚನೆ

ಈ ವೇಳೆ ಅಂಗಡಿ ಶಟರ್ ಬಂದು ಮಾಡಲು ತಿರುಗಿದಾಗ  ಗುಂಪಿನಲ್ಲಿ ಜಮಾಯಿಸಿದವರು ಯಾರೋ   ಬಷೀರ್ ರವರ ತಲೆಗೆ ಗಟ್ಟಿಯಾದ ವಸ್ತುವಿನಿಂದ ಹೊಡೆದಿದ್ದಾರೆ ಎನ್ನಲಾಗಿದೆ . ತಲೆ ತಿರುಗಿ ಅಸ್ವಸ್ಥರಾಗಿ ಜೀವಭಯದಿಂದ ಓಡಿ ಗುತ್ತಿಗಾರು ಮಸೀದಿ ಬಳಿ ಬಿದ್ದಿದ್ದಾರೆ ಎನ್ನಲಾಗಿದೆ.

ಇದನ್ನು ಗಮನಿಸಿದ  ಸ್ಥಳೀಯರು ಬಂದು  ತಲೆಯಿಂದ ರಕ್ತ ಸೋರುತಿರುವುದನ್ನು ಕಂಡು ಪ್ರಥಮ ಚಿಕಿತ್ಸೆ ಮಾಡಿ ನಂತರ ಆಂಬುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top